ನವದೆಹಲಿ (ಪಿಟಿಐ/ರಾಯಿಟರ್ಸ್): ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಇರಬಹುದು, ಅರ್ಥ ವ್ಯವಸ್ಥೆಯಲ್ಲಿನ ಚಟುವಟಿಕೆಗಳು ಮಂದಗತಿಗೆ ತಿರುಗಬಹುದು ಎಂಬ ಅಂದಾಜು ಇರುವ ಸಂದರ್ಭದಲ್ಲಿ, ಚಿಲ್ಲರೆ ಹಣದುಬ್ಬರ ಪ್ರಮಾಣವು ಹೆಚ್ಚಳ ಕಾಣಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಂದಾಜು ಮಾಡಿದೆ.

ಶನಿವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಸಚಿವಾಲಯವು, ‘ಮುಂದಿನ ತಿಂಗಳುಗಳಲ್ಲಿ ಬೇಡಿಕೆಗಳ ಮೇಲೆಯೂ ಪರಿಣಾಮ ಉಂಟಾಗಬಹುದು’ ಎಂದು ಹೇಳಿದೆ.

ಆದರೂ ದೇಶದ ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಬಹುಮಟ್ಟಿಗೆ ಸದೃಢವಾಗಿವೆ. ತಯಾರಿಕೆ ಹಾಗೂ ಸೇವಾ ವಲಯದ ಪಿಎಂಐ ಸೂಚ್ಯಂಕ ಏರಿಕೆ ಕಾಣುತ್ತಿದೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಇದೆ. ವಿದೇಶಿ ವಿನಿಮಯ ಮೀಸಲು ಮೊತ್ತವು ಬಾಹ್ಯ ಆಘಾತಗಳಿಂದ ರಕ್ಷಣೆ ನೀಡುವಂತಿದೆ ಎಂದು ಮಾಸಿಕ ಆರ್ಥಿಕ ಅವಲೋಕನ ವರದಿಯಲ್ಲಿ ಸಚಿವಾಲಯ ಹೇಳಿದೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶುರುವಾದ ನಂತರದಲ್ಲಿ ಜಾಗತಿಕ ಪರಿಸ್ಥಿತಿ ಹೆಚ್ಚು ಸವಾಲಿನದ್ದಾಗಿದೆ. ಕಚ್ಚಾ ತೈಲದ ಬೆಲೆಯು ಜಾಸ್ತಿ ಆಗಿದೆ, ಹಣಕಾಸಿನ ಪರಿಸ್ಥಿತಿ ಬಿಗಿಗೊಂಡಿದೆ. ಪ್ರಮುಖ ಅರ್ಥವ್ಯವಸ್ಥೆಗಳ ಬೆಳವಣಿಗೆಯ ವೇಗವು ಬಲ ಕಳೆದುಕೊಂಡಿದೆ. ಈ ಎಲ್ಲವುಗಳ ಪರಿಣಾಮದಿಂದ ಭಾರತವು ಪೂರ್ತಿಯಾಗಿ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ವರದಿ ಹೇಳಿದೆ.

ಕಚ್ಚಾವಸ್ತುಗಳ ಬೆಲೆಯಲ್ಲಿನ ಹೆಚ್ಚಳ ಹಾಗೂ ಈಚೆಗೆ ಇಂಧನ ಬೆಲೆ ಏರಿಕೆಯು ಸರಕು ಸಾಗಣೆ ಬೆಲೆ ಏರಿಕೆ, ಇಂಧನ ಮತ್ತು ಆಹಾರ ವಸ್ತುಗಳ ಬೆಲೆ ಏರಿಕೆಯ ರೂಪದಲ್ಲಿ ಗ್ರಾಹಕರಿಗೆ ಹಂತ ಹಂತವಾಗಿ ವರ್ಗಾವಣೆ ಆಗುತ್ತದೆ ಎಂಬುದನ್ನು ಹೇಳುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಳೆಯ ಕೊರತೆ ಗಣನೀಯ ಮಟ್ಟದಲ್ಲಿ ಆಗುವುದು ಹಾಗೂ ಈಗಿನ ಜಾಗತಿಕ ಬಿಕ್ಕಟ್ಟಿನ ಪರಿಸ್ಥಿತಿಯು ಆಹಾರ ವಸ್ತುಗಳ ಬೆಲೆ ಏರಿಕೆಗೆ ದಾರಿ ಮಾಡಿಕೊಡಬಹುದು. ಆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಬೇಡಿಕೆಯನ್ನು ಹಾಗೂ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ದುರ್ಬಲಗೊಳಿಸಬಹುದು ಎನ್ನಲಾಗಿದೆ.

ಜೂನ್ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 5ರ ಮಟ್ಟವನ್ನು ತಲುಪಬಹುದು ಎಂದು ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-1805298626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.