ಸೋಮವಾರ, ಫೆಬ್ರವರಿ 24, 2020
19 °C

ಚಿಲ್ಲರೆ ಹಣದುಬ್ಬರ ಶೇ 7.59ಕ್ಕೆ ಏರಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತಾದ ತರಕಾರಿ ಮಾರುಕಟ್ಟೆ

ನವದೆಹಲಿ: ಚಿಲ್ಲರೆ ಹಣದುಬ್ಬರ 2020ರ ಜನವರಿಯಲ್ಲಿ ಶೇ 7.59ಕ್ಕೆ ಏರಿಕೆಯಾಗಿರುವುದು ಕೇಂದ್ರೀಯ ಸಾಂಖ್ಯಿಕ ಕಚೇರಿ ಬುಧವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳಿಂದ ತಿಳಿದು ಬಂದಿದೆ. 

ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರವು ಮೂರು ವರ್ಷಗಳ ಗರಿಷ್ಟ ಮಟ್ಟ ತಲುಪಿದೆ. 2019ರ ಡಿಸೆಂಬರ್‌ನಲ್ಲಿ ಶೇ 7.35 ಹಾಗೂ 2019ರ ಜನವರಿಯಲ್ಲಿ ಶೇ 1.97ರಷ್ಟಿತ್ತು. ಈ ಹಿಂದೆ 2016ರ ಜುಲೈನಲ್ಲಿ ಶೇ 6.07 ಗರಿಷ್ಠ ಮಟ್ಟ ದಾಖಲಾಗಿತ್ತು. 

ಸರ್ಕಾರದ ಅಂಕಿ–ಅಂಶಗಳ ಪ್ರಕಾರ, 2019ರ ಡಿಸೆಂಬರ್‌ನಲ್ಲಿ ಶೇ 14.12ರಷ್ಟಿದ್ದ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಜನವರಿಯಲ್ಲಿ ಶೇ 13.63ಕ್ಕೆ ಇಳಿಕೆಯಾಗಿದೆ. 2019ರ ಜನವರಿಯಲ್ಲಿ ಆಹಾರ ಉತ್ಪನ್ನಗಳ ಬೆಲೆ ಶೇ (–) 2.24 ರಷ್ಟಿತ್ತು.

ಹಣದುಬ್ಬರದಲ್ಲಿ ದಿಢೀರ್‌ ಏರಿಕೆ ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊದರ (ಶೇ 5.15) ಯಥಾಸ್ಥಿತಿ ಕಾಯ್ದುಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು