ಸೋಮವಾರ, ಜೂನ್ 1, 2020
27 °C

ಅಗತ್ಯ ವಸ್ತುಗಳ ಕೊರತೆ ಇಲ್ಲ: ರಿಟೇಲ್‌ ವರ್ತಕರ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಇಲ್ಲ. ಆದರೆ ಜನರು ಗಾಬರಿಗೊಂಡು ಹೆಚ್ಚುವರಿ ಖರೀದಿ ನಡೆಸಿದರೆ ಮಾತ್ರವೇ ಸಮಸ್ಯೆ ಎದುರಾಗಲಿದೆ ಎಂದು ರಿಟೇಲ್‌ ವರ್ತಕರು ಹೇಳಿದ್ದಾರೆ.

ಲಾಕ್‌ಡೌನ್‌ನಿಂದ ದಿನಸಿ ಮತ್ತು ಅಗತ್ಯ ವಸ್ತುಗಳು ಸಿಗದೇ ಹೋಗುವ ಸಾಧ್ಯತೆ ಇದೆ ಎಂದು ಭಾವಿಸಿ  ಜನರು ಹೆಚ್ಚುವರಿಯಾಗಿ ಖರೀದಿಸುತ್ತಿದ್ದಾರೆ. ಇದನ್ನು ತಡೆಯಲು ಫ್ಯೂಚರ್‌ ಗ್ರೂಪ್‌ ಮತ್ತು ವಿ–ಮಾರ್ಟ್‌ನಂತಹ ಕೆಲವು ಸಂಘಟಿತ ವಲಯದ ವಹಿವಾಟುದಾರರು ಗ್ರಾಹಕರ ಖರೀದಿ ಮೇಲೆ ಮಿತಿ ಹೇರಿದ್ದಾರೆ.

‘ಲಭ್ಯತೆಯಲ್ಲಿ ಕೊರತೆ ಇಲ್ಲ. ಆದರೆ ಲಾಕ್‌ಡೌನ್‌ನಿಂದಾಗಿ ಪೂರೈಕೆ ಸಮಸ್ಯೆ ಎದುರಾಗಿದೆ. ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡಲಾಗಿದೆ. ಪೂರೈಕೆ ವ್ಯವಸ್ಥೆ ಸುಸೂತ್ರವಾಗಿ ನಡೆಯುವಂತೆ ಮಾಡಲಾಗುತ್ತಿದೆ’ ಎಂದು ರಿಟೇಲರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ ಸಿಇಒ ಕುಮಾರ್‌ ರಾಜಗೋಪಾಲನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು