7

ಡಾಟಾ ಸಮರದಲ್ಲಿ ಏರ್‌ಟೆಲ್‌ ಹೆಜ್ಜೆ: ₹499ಕ್ಕೆ 75 ಜಿಬಿ ಡಾಟಾ, ಉಚಿತ ಕರೆಗಳು

Published:
Updated:
ಏರ್‌ಟೆಲ್‌ ಡಾಟಾ ಸಮರ

ಬೆಂಗಳೂರು: ದೂರ ಸಂಪರ್ಕ ಸೇವಾ ಸಂಸ್ಥೆ ಭಾರತಿ ಏರ್‌ಟೆಕ್‌ ತನ್ನ ಪೋಸ್ಟ್ ಪೇಯ್ಡ್‌ ಪ್ಲಾನ್‌ ಪರಿಷ್ಕರಿಸಿದ್ದು, ಹಲವು ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದೆ. 

₹499 ಪೋಸ್ಟ್‌ ಪೇಯ್ಡ್‌ ಪ್ಲಾನ್‌ಗೆ ತಿಂಗಳಿಗೆ 40 ಜಿಬಿ ಡಾಟಾ ನೀಡುತ್ತಿದ್ದ ಏರ್‌ಟೆಲ್‌ ಇದೀಗ 75 ಜಿಬಿ ಡಾಟಾ ನೀಡುವುದಾಗಿ ಘೋಷಿಸಿದೆ. ಆದರೆ, ₹399ರ ಪ್ಲಾನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವೊಡಾಫೋನ್‌ ಒಂದು ವಾರದ ಹಿಂದೆಯಷ್ಟೇ ₹399ರ ರೆಡ್‌ ಪ್ಲಾನ್‌ ಪ್ರಕಟಿಸಿದ್ದು, ಗ್ರಾಹಕರಿಗೆ 40 ಜಿಬಿ ಡಾಟಾ ಪೂರೈಸುತ್ತಿದೆ. ಹಾಗಾಗಿ, ಏರ್‌ಟೆಲ್‌ ಸಹ ತನ್ನ ₹399ರ ಪ್ಲಾನ್‌ಗೆ 40 ಜಿಬಿ ಡಾಟಾ ನೀಡುವ ಸಾಧ್ಯತೆಯಿದೆ. 

ಡಾಟಾ ಪೂರೈಕೆಯನ್ನು 75 ಜಿಬಿಗೆ ಹೆಚ್ಚಿಸುವ ಮೂಲಕ ಏರ್‌ಟೆಲ್‌ ಡಾಡಾ ಸಮರದಲ್ಲಿ ಪ್ರಾಬಲ್ಯ ಸಾಧಿಸುವ ಮುನ್ಸೂಚನೆ ನೀಡಿದೆ. ₹499ರ ಪ್ಲಾನ್‌ನಲ್ಲಿ ಸ್ಥಳೀಯ ಮತ್ತು ರಾಷ್ಟ್ರವ್ಯಾಪಿ, ರೋಮಿಂಗ್‌ ಕರೆಗಳು ಸಂಪೂರ್ಣ ಉಚಿತ. ನಿತ್ಯ 100 ಉಚಿತ ಎಸ್‌ಎಂಎಸ್‌ ಹಾಗೂ ಗರಿಷ್ಠ 500 ಜಿಬಿ ವರೆಗೂ ಬಳಕೆಯಾಗದೆ ಉಳಿದ ಡಾಟಾ ಖಾತೆಗೆ ಸೇರುತ್ತದೆ. ಇದರೊಂದಿಗೆ 1–ವರ್ಷದ ಅಮೆಜಾನ್‌ ಪ್ರೈಮ್‌ ಮತ್ತು ವಿಂಕ್‌ ಟಿವಿ ಚಂದಾದಾರಿಕೆ ನೀಡುತ್ತಿದೆ. ಮೊಬೈಲ್‌ ಫೋನ್‌ ಹಾನಿಯಿಂದ ರಕ್ಷಣೆ ಒದಗಿಸುತ್ತಿದೆ. 

₹649ಕ್ಕಿಂತ ಹೆಚ್ಚಿನ ಪ್ಲಾನ್‌ಗಳ ಜತೆಗೆ ಕುಟುಂಬದವರಿಗೆ ಮತ್ತೊಂದು ಸಂಪರ್ಕ ಉಚಿತವಾಗಿ ನೀಡುತ್ತಿದೆ. ಇದರಿಂದಾಗಿ ಏರ್‌ಟೆಲ್‌ ಇತರ ದೂರ ಸಂಪರ್ಕ ಸೇವಾಧಾರ ಸಂಸ್ಥೆಗಳಿಗಿಂತ ಭಿನ್ನವಾಗಿ ಉಳಿದಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !