ಜಾಗತಿಕ ಕುಬೇರರ ಪಟ್ಟಿ 13ನೆ ಸ್ಥಾನಕ್ಕೆ ಮುಕೇಶ್‌ ಬಡ್ತಿ

ಬುಧವಾರ, ಮಾರ್ಚ್ 27, 2019
26 °C

ಜಾಗತಿಕ ಕುಬೇರರ ಪಟ್ಟಿ 13ನೆ ಸ್ಥಾನಕ್ಕೆ ಮುಕೇಶ್‌ ಬಡ್ತಿ

Published:
Updated:
Prajavani

ನ್ಯೂಯಾರ್ಕ್‌ : ಭಾರತದ ಅತ್ಯಂತ ಸಿರಿವಂತ ಉದ್ಯಮಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಒಡೆಯ ಮುಕೇಶ್‌ ಅಂಬಾನಿ ಅವರು, ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿದ ಈ ವರ್ಷದ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಬಡ್ತಿ ಪಡೆದು 13ನೆ ಸ್ಥಾನಕ್ಕೆ ಏರಿದ್ದಾರೆ.

ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ಸ್ಥಾಪಕ ಜೆಫ್‌ ಬೆಜೊಸ್‌ (55) ತಮ್ಮ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ₹ 9.71 ಲಕ್ಷ ಕೋಟಿ ಸಂಪತ್ತಿನ ಒಡೆಯರಾಗಿರುವ ಬೆಜೊಸ್‌, ಬಿಲ್‌ ಗೇಟ್ಸ್‌ ಮತ್ತು ವಾರನ್‌ ಬಫೆಟ್‌ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ.

ಮುಕೇಶ್‌ ಅಂಬಾನಿ (61) ಅವರ ಸಂಪತ್ತು ವರ್ಷದ ಹಿಂದೆ ₹ 2.80 ಲಕ್ಷ ಕೋಟಿಗಳಷ್ಟಿತ್ತು. ಈಗ ₹ 3.50 ಲಕ್ಷ ಕೋಟಿಗೆ ಏರಿಕೆಯಾಗಿದೆ. ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 19ನೆ ಸ್ಥಾನದಲ್ಲಿದ್ದ ಅವರು ಈಗ 13ನೆ ಸ್ಥಾನಕ್ಕೆ ಏರಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !