ಗುರುವಾರ , ಡಿಸೆಂಬರ್ 12, 2019
17 °C

₹8 ಲಕ್ಷ ಕೋಟಿ ದಾಟಿದ ಆರ್‌ಐಎಲ್‌ ಮೌಲ್ಯ

Published:
Updated:

ನವದೆಹಲಿ: ಮಾರುಕಟ್ಟೆ ಮೌಲ್ಯದಲ್ಲಿ ₹ 8 ಲಕ್ಷ ಕೋಟಿ ಗಡಿ ದಾಟಿದ ಭಾರತದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಪಾತ್ರವಾಗಿದೆ. 

ಗುರುವಾರದ ವಹಿವಾಟಿನಲ್ಲಿ ಕಂಪನಿ ಷೇರುಗಳು ಶೇ 1.86 ರಷ್ಟು ಏರಿಕೆಯಾಗಿ ಪ್ರತಿ ಷೇರಿನ ಬೆಲೆ 52 ವಾರಗಳ ಗರಿಷ್ಠ ಮಟ್ಟವಾದ
₹1,273ರಂತೆ ವಹಿವಾಟು ನಡೆಸಿ, ಈ ದಾಖಲೆ ಮಾಡಿದೆ.

ಜುಲೈನಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಕಂಪನಿಯು ಫೈಬರ್‌ ಟು ಹೋಮ್‌ , ಗಿಗಾ ಫೈಬರ್‌ ಸೇವೆಗಳಿಗೆ ಚಾಲನೆ ನೀಡುವುದಾಗಿ ಪ್ರಕಟಿಸಿತ್ತು. ಇದರಿಂದಾಗಿ ಷೇರುಗಳ ಬೆಲೆಯು ಏರಿಕೆ ಕಾಣುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಜುಲೈ 13 ರಂದು ಕಂಪನಿಯ ಷೇರು ಮಾರುಕಟ್ಟೆಯಲ್ಲಿನ ಬಂಡವಾಳ ಮೌಲ್ಯವು ₹ 7 ಲಕ್ಷ ಕೋಟಿ ಗಡಿ ದಾಟಿತ್ತು. ಆ ಮೂಲಕ ಈ ಸಾಧನೆ ಮಾಡಿದ ಎರಡನೇ ಕಂಪನಿಯಾಗಿ ಹೊರಹೊಮ್ಮಿತ್ತು.

ದೇಶದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತು ಕಂಪನಿಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಮೇ ತಿಂಗಳಿನಲ್ಲಿ ₹ 7 ಲಕ್ಷ ಕೋಟಿಯ ಗಡಿ ದಾಟಿತ್ತು. ಈಗ ಟಿಸಿಎಸ್‌ನ ಮಾರುಕಟ್ಟೆ ಮೌಲ್ಯ ₹ 7.79 ಲಕ್ಷ ಕೋಟಿಗೆ ತಲುಪಿದೆ.

ಮಾರುಕಟ್ಟೆ ಮೌಲ್ಯಕ್ಕೆ ಸಂಬಂಧಿಸಿದಂತೆ ಷೇರುಪೇಟೆಯಲ್ಲಿ ಈ ಎರಡೂ ಕಂಪನಿಗಳ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿರುತ್ತದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು