ಭಾನುವಾರ, ಜನವರಿ 24, 2021
28 °C

ಡಿಸೆಂಬರ್‌ನಲ್ಲಿ 6 ಕೋಟಿ ಜಿಎಸ್‌ಟಿ ಇ–ಇನ್‌ವಾಯ್ಸ್‌ ಸೃಷ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಡಿಸೆಂಬರ್‌ನಲ್ಲಿ 6.03 ಕೋಟಿ ಜಿಎಸ್‌ಟಿ ಇ–ಇನ್‌ವಾಯ್ಸ್‌ ಸೃಷ್ಟಿಯಾಗಿದೆ. ನವೆಂಬರ್‌ನಲ್ಲಿ ಆಗಿದ್ದ 5.89 ಕೋಟಿಗೆ ಹೋಲಿಸಿದರೆ ತುಸು ಏರಿಕೆ ಕಂಡುಬಂದಿದೆ ಎಂದು ಐ.ಟಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

2019ರ ಸೆಪ್ಟೆಂಬರ್‌–ಡಿಸೆಂಬರ್‌ ಅವಧಿಗೆ ಹೋಲಿಸಿದರೆ 2020ರ ಸೆಪ್ಟೆಂಬರ್‌–ಡಿಸೆಂಬರ್‌ ಅವಧಿಯಲ್ಲಿ ಹೆಚ್ಚು ಇ–ವೇ ಬಿಲ್‌ ಸೃಷ್ಟಿಯಾಗಿದೆ ಎಂದೂ ಹೇಳಿದೆ.

ಜಿಎಸ್‌ಟಿ ಇ–ಇನ್‌ವಾಯ್ಸ್‌ ವ್ಯವಸ್ಥೆ ಆರಂಭಗೊಂಡು ಮೂರು ತಿಂಗಳು ಕಳೆದಿದ್ದು, ಹೊಸ ವ್ಯವಸ್ಥೆಗೆ ಬದಲಾಗಲು ತೆರಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದಿದೆ.

ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ಜಿಎಸ್‌ಟಿ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ,ವಾರ್ಷಿಕ ವಹಿವಾಟು ಮಿತಿ ₹ 500 ಕೋಟಿಗೂ ಹೆಚ್ಚು ಇರುವ ಉದ್ದಿಮೆಗಳು ಇ–ಇನ್‌ವಾಯ್ಸ್‌ ಪಡೆಯುವುದು ಅಕ್ಟೋಬರ್‌ 1 ರಿಂದ ಕಡ್ಡಾಯ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು