ಟರ್ಕಿ ಆರ್ಥಿಕತೆ ಏರಿಳಿತ: ಡಾಲರ್‌ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

7

ಟರ್ಕಿ ಆರ್ಥಿಕತೆ ಏರಿಳಿತ: ಡಾಲರ್‌ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

Published:
Updated:

ಮುಂಬೈ: ಟರ್ಕಿ ದೇಶದ ಆರ್ಥಿಕತೆಯಲ್ಲಿ ತಲೆದೊರಿರುವ ಏರಿಳಿತವು ಭಾರತದ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿ ರೂಪಾಯಿಯ ಮೌಲ್ಯ ಡಾಲರ್‌ ಎದುರು ಸಾರ್ವಕಾಲಿಕ ದಾಖಲೆಯ ಕನಿಷ್ಠ ಮಟ್ಟ ₹69.62ಕ್ಕೆ ಕುಸಿದಿದೆ. 

ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯ ₹68.84 ಇತ್ತು. 

ಅಮೆರಿಕಾದೊಂದಿಗಿನ ರಾಜತಾಂತ್ರಿಕ ಸಂಬಂಧಗಳು ಅಲ್ಪಮಟ್ಟಿಗೆ ಹದಗೆಟ್ಟ ಬಳಿಕ ಟರ್ಕಿಯು ತನ್ನ ಆರ್ಥಿಕತೆ ಮೇಲೆ ಕೆಲವು ನಿಯಂತ್ರಣ ಕ್ರಮಗಳನ್ನು ಜಾರಿ ಮಾಡಿದೆ. ಅಮೆರಿಕ, ಟರ್ಕಿ ಮೇಲೆ ಹೇರಿರುವ ಆರ್ಥಿಕ ನಿರ್ಬಂಧ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸರಕು–ಸೇವೆಗಳ ವಿನಿಮಯವನ್ನು ಬಾಧಿಸಿದೆ. ಇದರಿಂದಾಗಿ ಟರ್ಕಿಯ ಕರೆನ್ಸಿ ಲಿರಾ ಮೌಲ್ಯವೂ ಕುಸಿದಿದೆ. 1 ಲಿರಾ ಮೌಲ್ಯವು ₹10ಕ್ಕೆ ಸಮವಾಗಿದೆ. 

ರೂಪಾಯಿ ಮೌಲ್ಯ ಕುಸಿತವು 37 ಸಾವಿರ ಅಂಶ ದಾಟಿ ಏರುಗತಿಯಲ್ಲಿದ್ದ ಷೇರುಪೇಟೆಯ ಸೂಚ್ಯಂಕವನ್ನು ಕೆಳಕ್ಕೆ ಎಳೆದಿದೆ. ಸೋಮವಾರದ ಮಧ್ಯಾಹ್ನದ ವೇಳೆಗೆ ಸೂಚ್ಯಂಕ 280 ಅಂಶ ಕುಸಿದಿದೆ. ನಿಫ್ಟಿ ಕೂಡ 50 ಅಂಶ ಕಡಿಮೆಯಾಗಿದೆ. 

ರೂಪಾಯಿ ಮೌಲ್ಯ ಕುಸಿತವನ್ನು ಸರಿದೂಗಿಸಲು ಆರ್‌ಬಿಐ ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !