ನವದೆಹಲಿ: ಜಾಗತಿಕ ಯುದ್ಧ ಅನಿಶ್ಚಿತತೆ ನಡುವೆ ಭಾರತದ ರೂಪಾಯಿ ಮೌಲ್ಯ ಕುಸಿತದ ಹಾದಿ ಹಿಡಿದಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 18 ಪೈಸೆ ಕುಸಿದು 96.38ರಲ್ಲಿ ವಹಿವಾಟು ಆರಂಭಿಸಿದೆ.

ಸತತ 8ನೇ ದಿನವೂ ಭಾರತದ ರೂಪಾಯಿ ಮೌಲ್ಯ ಕುಸಿದಿದ್ದು, ಕಚ್ಚಾ ತೈಲದ ಆಮದಿನ ಮೇಲೆ ಬಹುವಾಗಿ ಅವಲಂಬನೆ ಇರುವ ಭಾರತಕ್ಕೆ ಉತ್ತಮ ಬೆಳವಣಿಗೆ ಅಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ.

ಸೋಮವಾರ ₹96.19ಕ್ಕೆ ವಹಿವಾಟು ಅಂತ್ಯಗೊಳಿಸಿದ್ದ ರೂಪಾಯಿ ಇಂದು ಬೆಳಿಗ್ಗೆ ಮತ್ತೆ ಕುಸಿತ ದಾಖಲಿಸಿದೆ.

ಯುದ್ಧದ ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ಹೂಡಿಕೆದಾರರು ಮತ್ತು ಫಾರೆಕ್ಸ್ ವ್ಯಾಪಾರಿಗಳು ತಮ್ಮ ಬಂಡವಾಳವನ್ನು ಬೇರೆಡೆ ವರ್ಗಾಯಿಸುವತ್ತ ಆಸಕ್ತಿ ತೋರುತ್ತಿದ್ದಾರೆ.

ಅಮೆರಿಕ ಡಾಲರ್, ಚಿನ್ನ ಮತ್ತು ಬಾಂಡ್ಗಳಂತಹ ಸುರಕ್ಷಿತ ಹೂಡಿಕೆಯತ್ತ ಬಂಡವಾಳ ವರ್ಗಾಯಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಇತ್ತ, ದೇಶೀಯ ಷೇರು ಸೂಚ್ಯಂಕಗಳಾ ಸೆನ್ಸೆಕ್ಸ್ ಮತ್ತು ನಿಫ್ಟಿ ತುಸು ಏರಿಕೆಯೊಂದಿಗೆ ವಹಿವಾಟು ಆರಂಭಿಸಿವೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 366.71 ಅಂಶಗಳಷ್ಟು ಏರಿಕೆಯಾಗಿ 75,706.88ರಲ್ಲಿ. ನಿಫ್ಟಿ 107.45 ಅಂಶ ಏರಿಕೆ ಕಂಡು 23,760ರಲ್ಲಿ ವಹಿವಾಟು ಆರಂಭಿಸಿವೆ.

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಇರಾನ್ ಮೇಲೆ ದಾಳಿ ನಡೆಸದಿರುಲು ಟ್ರಂಪ್ ನಿರ್ಧರಿಸಿರುವುದು ಷೇರುಪೇಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಾರಣವಾಗಿದೆ.

16 ಪ್ರಮುಖ ವಲಯಗಳಲ್ಲಿ ಹದಿನಾಲ್ಕು ಏರಿಕೆಯೊಂದಿಗೆ ವಹಿವಾಟು ಆರಂಭಿಸಿದವು. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳು ತಲಾ ಶೇ 0.3 ರಷ್ಟು ಏರಿಕೆ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.