ಡಾಲರ್‌ಗೆ ಬೇಡಿಕೆ; ರೂಪಾಯಿ ಕುಸಿತ

7

ಡಾಲರ್‌ಗೆ ಬೇಡಿಕೆ; ರೂಪಾಯಿ ಕುಸಿತ

Published:
Updated:

ನವದೆಹಲಿ: ಇತರ ದೇಶಗಳ ಕರೆನ್ಸಿ ಎದುರು ಡಾಲರ್‌ ಮೌಲ್ಯ ಹೆಚ್ಚಳಗೊಂಡಿರುವುದರಿಂದಲೇ ರೂಪಾಯಿ ಬೆಲೆ ಕುಸಿತ ಕಂಡಿದೆ ಎಂದು ಎಚ್ಎಸ್‌ಬಿಸಿ ಗ್ಲೋಬಲ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ವಿಶ್ಲೇಷಿಸಿದೆ.

ಇದೇ ಮೊದಲ ಬಾರಿಗೆ ರೂಪಾಯಿ ಡಾಲರ್‌ ಕರೆನ್ಸಿ ವಿನಿಮಯ ದರವು ಈ ತಿಂಗಳ 16ರಂದು ದಾಖಲೆ ಮಟ್ಟವಾದ 70ರ ಗಡಿ ದಾಟಿತ್ತು. ಟರ್ಕಿಯ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ವಿಶ್ವದಾದ್ಯಂತ ಡಾಲರ್‌ ಮೌಲ್ಯ ಗಣನೀಯ ಏರಿಕೆ ದಾಖಲಿಸಿತ್ತು.

‘ರಷ್ಯಾ, ಬ್ರೆಜಿಲ್‌, ಅರ್ಜೆಂಟೀನಾ ಮತ್ತು ಟರ್ಕಿಯ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿ ವಿನಿಮಯ ದರ ಉತ್ತಮ ಮಟ್ಟದಲ್ಲಿಯೇ ಇದೆ. ಡಾಲರ್‌ಗೆ ಬೇಡಿಕೆ ಹೆಚ್ಚಿದ್ದರಿಂದ ಈ ಪರಿಸ್ಥಿತಿ ಉದ್ಭವಿಸಿದೆಯೇ ಹೊರತು, ರೂಪಾಯಿಯ ದೌರ್ಬಲ್ಯದಿಂದ ಅಲ್ಲ’ ಎಂದು ಸಂಸ್ಥೆಯ ಮುಖ್ಯ ಹೂಡಿಕೆ ಅಧಿಕಾರಿ ತುಷಾರ್‌ ಪ್ರಧಾನ್‌ ಹೇಳಿದ್ದಾರೆ.

‘ಏಷ್ಯಾದ ದೇಶಗಳಲ್ಲಿಯೇ ರೂಪಾಯಿ ಮೌಲ್ಯವು ದಾಖಲೆ ಎನ್ನಬಹುದಾದ ಶೇ 8.5ರಷ್ಟು ಕುಸಿತ ಕಂಡಿದೆ. ಜಾಗತಿಕ ವಿದ್ಯಮಾನಗಳ ಅನಿಶ್ಚಿತತೆ ಮತ್ತು ಹಣದುಬ್ಬರಕ್ಕೆ ಸಂಬಂಧಿಸಿದ ಕಳವಳದ ಕಾರಣಕ್ಕೆ ಈ ಬೆಳವಣಿಗೆ ನಡೆದಿದೆಯಷ್ಟೆ. ದೇಶಿ ಷೇರುಪೇಟೆಗಳ ಮೇಲೆ ಇದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಷೇರು ವಹಿವಾಟು ಗರಿಷ್ಠ ಮಟ್ಟದಲ್ಲಿ ನಡೆದಿದ್ದು, ಷೇರುಗಳು ಉತ್ತಮ ಗಳಿಕೆ ದಾಖಲಿಸುತ್ತಿವೆ’ ಎಂದು ವಿಶ್ಲೇಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !