ಮುಂಬೈ : ಬುಧವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಇನ್ನಷ್ಟು ಕುಸಿದಿದ್ದು, ಅಮೆರಿಕದ ಡಾಲರ್ ಎದುರು ಇದುವರೆಗಿನ ಕನಿಷ್ಠ ಮಟ್ಟವಾದ 96.86ಕ್ಕೆ ತಲುಪಿದೆ.

ಕಚ್ಚಾ ತೈಲದ ಬೆಲೆಯು ಕಡಿಮೆ ಆಗದಿರುವುದು ಹಾಗೂ ಹಣದುಬ್ಬರ ಹೆಚ್ಚಳದ ಭೀತಿಯು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾದವು. ಬುಧವಾರ ರೂಪಾಯಿ ಮೌಲ್ಯವು 16 ಪೈಸೆ ಕುಸಿದಿದೆ. ಸತತ ಒಂಬತ್ತು ವಹಿವಾಟಿನ ದಿನಗಳಿಂದ ರೂಪಾಯಿಯು ಡಾಲರ್ ಎದುರು ಕುಸಿಯುತ್ತಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ದಿನದ ವಹಿವಾಟಿನ ನಡುವಿನಲ್ಲಿ 96.95ರ ಮಟ್ಟದವರೆಗೂ ಕುಸಿದಿತ್ತು. ನಂತರ ತುಸು ಚೇತರಿಕೆ ಕಂಡಿತು. ಮಂಗಳವಾರದ ವಹಿವಾಟಿನಲ್ಲಿ ಮೌಲ್ಯವು 50 ಪೈಸೆಯಷ್ಟು ಇಳಿದಿತ್ತು.

‘ಡಾಲರ್ ಬಲವರ್ಧನೆ, ಅಮೆರಿಕದ ಬಾಂಡ್ ಗಳಿಕೆಯು ಹೆಚ್ಚಾಗಿರುವುದು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾದವು’ ಎಂದು ಮಿರೈ ಅಸೆಟ್ ಶೇರ್ಖಾನ್ ಸಂಸ್ಥೆಯ ಸರಕುಗಳ ಸಂಶೋಧನಾ ವಿಭಾಗದ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.

ರೂಪಾಯಿ ಮೌಲ್ಯವು ತೀವ್ರವಾಗಿ ಕುಸಿಯುತ್ತಿರುವುದು ನೀತಿ ನಿರೂಪಕರಿಗೆ, ಹೂಡಿಕೆದಾರರಿಗೆ ಹಾಗೂ ಉದ್ದಿಮೆಗಳಿಗೆ ಬಹಳ ದೊಡ್ಡ ಆರ್ಥಿಕ ಎಚ್ಚರಿಕೆಯಾಗಿ ಕಾಣಿಸುತ್ತಿದೆ. ಹಿಂದೊಂದು ಸಂದರ್ಭದಲ್ಲಿ ಏಷ್ಯಾದ ಅತ್ಯಂತ ಸ್ಥಿರವಾದ ಕರೆನ್ಸಿ ಆಗಿದ್ದ ರೂಪಾಯಿಯು ಈ ವರ್ಷದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಕರೆನ್ಸಿಗಳ ಪೈಕಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಕರೆನ್ಸಿಗಳಲ್ಲಿ ಒಂದಾಗಿದೆ.

ಕಚ್ಚಾ ತೈಲದ ಬೆಲೆ ಏರಿಕೆ, ದೇಶದಿಂದ ಬಂಡವಾಳದ ನಿರಂತರ ಹೊರಹರಿವು ಮತ್ತು ಹೆಚ್ಚುತ್ತಿರುವ ವ್ಯಾಪಾರ ಕೊರತೆ ಅಂತರ, ಡಾಲರ್ ಬಲವರ್ಧನೆಯು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.