ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಯಿ ಬೆಲೆ 77 ಪೈಸೆ ಹೆಚ್ಚಳ

Last Updated 22 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿಯ ವಿದೇಶಿ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ವಿನಿಮಯ ದರವು ಗುರುವಾರದ ವಹಿವಾಟಿನಲ್ಲಿ 77 ಪೈಸೆಗಳಷ್ಟು ಹೆಚ್ಚಳಗೊಂಡಿತು.

ವಿದೇಶಿ ಬಂಡವಾಳದ ಒಳ ಹರಿವಿನಲ್ಲಿ ಏರಿಕೆ ಮತ್ತು ಕಚ್ಚಾ ತೈಲದ ಬೆಲೆ ಇಳಿಕೆಯ ಫಲವಾಗಿ ರೂಪಾಯಿ ವಿನಿಮಯ ದರ ಈಗ ₹ 70.69ಕ್ಕೆ ಏರಿದೆ.

ವಿದೇಶಿ ಕರೆನ್ಸಿಗಳ ಎದುರು ಡಾಲರ್‌ ಬೆಲೆ ಇಳಿಕೆಯಾಗುತ್ತಿದೆ. ಹೀಗಾಗಿ ರೂಪಾಯಿ ಬೆಲೆ ಸತತ 7ನೇ ದಿನವೂ ಏರಿಕೆ ದಾಖಲಿಸಿದೆ.

ಷೇರುಪೇಟೆ ವಹಿವಾಟು: ಲೋಹ, ವಾಹನ ಮತ್ತು ಬ್ಯಾಂಕಿಂಗ್‌ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು. ಹೀಗಾಗಿ ಮುಂಬೈ ಷೇರುಪೇಟೆ ಸೂಚ್ಯಂಕ 218 ಅಂಶ ಇಳಿಕೆಯಾಗಿ 34,981ರಲ್ಲಿ ವಹಿವಾಟು ಅಂತ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT