ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲರ್‌ ಎದುರು ರೂಪಾಯಿ ಬೆಲೆ 70.74ಕ್ಕೆ ಕುಸಿತ

Last Updated 30 ಆಗಸ್ಟ್ 2018, 16:59 IST
ಅಕ್ಷರ ಗಾತ್ರ

ಮುಂಬೈ : ಡಾಲರ್‌ ಎದುರು ರೂಪಾಯಿ ವಿನಿಮಯ ದರವು ಗುರುವಾರದ ವಹಿವಾಟಿನಲ್ಲಿ 15 ಪೈಸೆ ಕಡಿಮೆಯಾಗಿ, 70.74ಕ್ಕೆ ಕುಸಿದಿದೆ.

ದಿನದ ವಹಿವಾಟಿನ ಒಂದು ಹಂತದಲ್ಲಿ ರೂಪಾಯಿ ಮೌಲ್ಯ 70.90ರ ಮಟ್ಟಕ್ಕೆ ಕುಸಿತ ಕಂಡಿತ್ತು. ತಿಂಗಳಾಂತ್ಯದಲ್ಲಿ ಆಮದುದಾರರಿಂದ ಡಾಲರ್‌ಗೆ ಹೆಚ್ಚಿದ ಬೇಡಿಕೆ, ಕಚ್ಚಾ ತೈಲ ಬೆಲೆ ಹೆಚ್ಚಳ, ವಿದೇಶಿ ಮಾರುಕಟ್ಟೆಗಳಲ್ಲಿ ಡಾಲರ್‌ ಮೌಲ್ಯದಲ್ಲಿನ ಏರಿಕೆ ಮತ್ತು ದೇಶಿ ಷೇರುಪೇಟೆಗಳ ಸೂಚ್ಯಂಕ ಕುಸಿತವು ರೂಪಾಯಿ ಅಪಮೌಲ್ಯದ ಮೇಲೆ ಪ್ರಭಾವ ಬೀರುತ್ತಿವೆ.

ರಫ್ತುದಾರರ ಅನಿಶ್ಚಿತತೆ: ರೂಪಾಯಿ ನಿರಂತರವಾಗಿ ಅಪಮೌಲ್ಯಗೊಳ್ಳುತ್ತಿರುವುದರಿಂದ ರಫ್ತುದಾರರು ಅನಿಶ್ಚಿತತೆ ಎದುರಿಸುತ್ತಿದ್ದಾರೆ.

ರೂಪಾಯಿ ಬೆಲೆಯು ತೀವ್ರ ಏರಿಳಿತ ಕಾಣುತ್ತಿರುವುದರಿಂದ ಜಾಗತಿಕ ಖರೀದಿದಾರರು ಸರಕುಗಳ ಪೂರೈಕೆಗೆ ಸಂಬಂಧಿಸಿದಂತೆ ಗುತ್ತಿಗೆಗಳನ್ನು ಪರಾಮರ್ಶಿಸಲು ಒತ್ತಾಯಿಸುತ್ತಿದ್ದಾರೆ. ರೂಪಾಯಿ ಅಪಮೌಲ್ಯದಿಂದ ಶೇ 20ರಷ್ಟು ರಫ್ತುದಾರರಷ್ಟೇ ಲಾಭ ಮಾಡಿಕೊಂಡಿದ್ದಾರೆ ಎಂದು ರಫ್ತು ಸಂಘಟನೆಗಳ ಒಕ್ಕೂಟ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT