ಭಾನುವಾರ, ಸೆಪ್ಟೆಂಬರ್ 15, 2019
27 °C

ರೂಪಾಯಿ ಏರಿಕೆ

Published:
Updated:

ಮುಂಬೈ (ಪಿಟಿಐ): ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಸತತ ಎರಡನೇ ದಿನವೂ ಏರಿಕೆಯಾಗಿದೆ.

ಗುರುವಾರದ ವಹಿವಾಟಿನಲ್ಲಿ 28 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 71.84ರಂತೆ ವಿನಿಮಯಗೊಂಡಿತು. ಎರಡು ವಹಿವಾಟುಗಳಲ್ಲಿ ರೂಪಾಯಿ ಮೌಲ್ಯ 55 ಪೈಸೆ ಹೆಚ್ಚಾಗಿದೆ.

ಅಮೆರಿಕ ಮತ್ತು ಚೀನಾ  ವಾಣಿಜ್ಯ ಮಾತುಕತೆ ಮುಂದುವರಿಸುವುದಾಗಿ ಹೇಳಿವೆ. ಇದರ ಜತೆಗೆ ಡಾಲರ್‌ ಮೌಲ್ಯ ಇಳಿಕೆಯೂ ರೂಪಾಯಿ ಮೌಲ್ಯ ಹೆಚ್ಚಾಗುವಂತೆ ಮಾಡಿದೆ.

Post Comments (+)