ಸೇಲ್‌: ಪರಿಸರ ಸ್ನೇಹಿ ಕಸದ ತೊಟ್ಟಿ

ಗುರುವಾರ , ಏಪ್ರಿಲ್ 25, 2019
33 °C

ಸೇಲ್‌: ಪರಿಸರ ಸ್ನೇಹಿ ಕಸದ ತೊಟ್ಟಿ

Published:
Updated:
Prajavani

ನವದೆಹಲಿ: ಭಾರತೀಯ ಉಕ್ಕು ಪ್ರಾಧಿಕಾರವು (ಎಸ್‌ಎಐಎಲ್‌), ದೆಹಲಿಯಲ್ಲಿ ಪರಿಸರ ಸ್ನೇಹಿಯಾದ ಸ್ಟೇನ್‌ಲೆಸ್‌ ಸ್ಟೀಲ್‌ನಿಂದ ತಯಾರಿಸಿದ ಕಸದ ತೊಟ್ಟಿಗಳನ್ನು ಪರಿಚಯಿಸಿದೆ.

ನಗರಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಮತ್ತು ಸೌಂದರ್ಯವರ್ಧನೆ ಮಾಡಲು ಈ ಉಕ್ಕಿನಿಂದ ತಯಾರಿಸಿದ ಕಸದ ತೊಟ್ಟಿಗಳು ನೆರವಾಗಲಿವೆ. ದಕ್ಷಿಣ ದೆಹಲಿ ನಗರ ಪಾಲಿಕೆ ಅಭಿವೃದ್ಧಿಪಡಿಸಿರುವ, ‘ಸ್ಮಾರ್ಟ್‌ ಗಾರ್ಬೆಜ್‌ ಸ್ಟೇಷನ್’ನಲ್ಲಿ ನಿರ್ಮಿಸಿದ ಆರ್‌ಸಿಸಿ ಗುಂಡಿಯಲ್ಲಿ ಈ ಉಕ್ಕಿನ ಸ್ಮಾರ್ಟ್‌ ತೊಟ್ಟಿಗಳನ್ನು ಅಳವಡಿಸಲಾಗುವುದು.

ಉಕ್ಕಿನ ಹೊದಿಕೆ ಇರುವ ಈ ತೊಟ್ಟಿಗಳಲ್ಲಿ ಮರುಬಳಕೆ ಮಾಡುವ ಮತ್ತು ಮರುಬಳಕೆ ಮಾಡದ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ಇದರಿಂದ ಜನರನ್ನು ದುರ್ವಾಸನೆ ಮತ್ತು ಕಾಯಿಲೆಗಳಿಂದಲೂ ದೂರ ಇರಿಸಬಹುದು.

ಈ ಸ್ಮಾರ್ಟ್‌ ಕಸದ ತೊಟ್ಟಿಗಳಲ್ಲಿ ‘ಐಒಟಿ’ ತಂತ್ರಜ್ಞಾನ ಬಳಸುವ ಆಲೋಚನೆ ಇದೆ. ತೊಟ್ಟಿ ಭರ್ತಿಯಾಗುತ್ತಿದ್ದಂತೆ ಕಸ ಸಾಗಿಸುವ ವಾಹನಕ್ಕೆ ಸ್ವಯಂಚಾಲಿತ ಸಂದೇಶ ರವಾನೆಯಾಗುವ ಸೌಲಭ್ಯ ಜಾರಿಗೆ ತರಲು ಉದ್ದೇಶಿಸಲಾಗಿದೆ.

ದೇಶದ ಇತರ ಮಹಾನಗರಗಳಲ್ಲಿಯೂ ಇದೇ ಬಗೆಯ ಕಸ ಸಂಗ್ರಹ ಮತ್ತು ಸಾಗಣೆ ವ್ಯವಸ್ಥೆ ಕಲ್ಪಿಸಲು ’ಸೇಲ್‌’ ಉದ್ದೇಶಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !