ಮಂಗಳವಾರ, ಅಕ್ಟೋಬರ್ 22, 2019
21 °C
ತೈಲ, ಅನಿಲ, ಗಣಿ ವಲಯದಲ್ಲಿ ₹ 7 ಲಕ್ಷ ಕೋಟಿ

ಭಾರತದಲ್ಲಿ ಹೂಡಿಕೆಗೆ ಸೌದಿ ಆಸಕ್ತಿ

Published:
Updated:

ನವದೆಹಲಿ: ಕಚ್ಚಾ ತೈಲ ರಫ್ತು ಮಾಡುವ ಪ್ರಮುಖ ದೇಶವಾಗಿರುವ ಸೌದಿ ಅರೇಬಿಯಾ, ಭಾರತದಲ್ಲಿ ₹ 7 ಲಕ್ಷ ಕೋಟಿ ಹೂಡಿಕೆ ಮಾಡಲು ಮುಂದಾಗಿದೆ.

‘ಭಾರತವು ಹೂಡಿಕೆಗೆ ಅತ್ಯಂತ ಆಕರ್ಷಕ ತಾಣ. ತೈಲ, ಅನಿಲ ಮತ್ತು ಗಣಿ ವಲಯಗಳಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ದೆಹಲಿಯೊಂದಿಗೆ ದೀರ್ಘಾವಧಿಯ ಪಾಲುದಾರಿಕೆ ಹೊಂದಲು ಬಯಸುತ್ತೇವೆ’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಸೌದಿ ಅರೇಬಿಯಾದ ರಾಯಭಾರಿ ಡಾ. ಸೌದ್ ಮೊಹಮ್ಮದ್ ಅಲ್–ಸತಿ ತಿಳಿಸಿದ್ದಾರೆ.

ಭಾರತ ಮತ್ತು ಸೌದಿ ಮಧ್ಯೆ ವಿವಿಧ ವಲಯಗಳಲ್ಲಿ ವಹಿವಾಟು ವೃದ್ಧಿಸುವ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರ ವಿಷನ್‌ 2030 ಕಾರ್ಯಕ್ರಮದ ಭಾಗವಾಗಿ ಈ ಹೂಡಿಕೆಗೆ ಮುಂದಾಗಿರುವುದಾಗಿ ಹೇಳಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)