ಭಾನುವಾರ, ನವೆಂಬರ್ 17, 2019
21 °C

ಅರಾಮ್ಕೊ ಐಪಿಒ ಬಿಡುಗಡೆಗೆ ಒಪ್ಪಿಗೆ

Published:
Updated:

ರಿಯಾದ್: ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ತೈಲ ಉತ್ಪಾದನಾ ಸಂಸ್ಥೆ ಅರಾಮ್ಕೊದ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಒಪ್ಪಿಗೆ ದೊರೆತಿದೆ.

ಸೌದಿ ಅರೇಬಿಯಾದ ಕ್ಯಾಪಿಟಲ್‌ ಮಾರ್ಕೇಟ್ಸ್‌ ಅಥಾರಿಟಿಯು ಐಪಿಒಗೆ ಒಪ್ಪಿಗೆ ನೀಡಿದೆ. ಆದರೆ, ಹೆಚ್ಚಿನ ಮಾಹಿತಿ ನೀಡಿಲ್ಲ. ಡಿಸೆಂಬರ್‌ ತಿಂಗಳ ಮಧ್ಯಭಾಗದಲ್ಲಿ ವಹಿವಾಟಿಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಸದ್ಯ, ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ಷೇರು ಖರೀದಿಸುವ ಅವಕಾಶ ನೀಡುವ ಯೋಚನೆ ಇಲ್ಲ ಎಂದು ಸಂಸ್ಥೆ ತಿಳಿಸಿದೆ.

ಪ್ರತಿಕ್ರಿಯಿಸಿ (+)