ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಉತ್ಪಾದನೆ ಹೆಚ್ಚಿಸಲು ಸಿದ್ಧ: ಸೌದಿ ಅರೇಬಿಯಾ

Last Updated 23 ಅಕ್ಟೋಬರ್ 2018, 16:50 IST
ಅಕ್ಷರ ಗಾತ್ರ

ರಿಯಾದ್: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಮತೋಲನ ಮೂಡಿಸಲು, ಉತ್ಪಾದನೆ ಹೆಚ್ಚಿಸಲು ಸಿದ್ಧವಿರುವುದಾಗಿ ಸೌದಿ ಅರೇಬಿಯಾದ ಇಂಧನ ಸಚಿವ ಖಾಲಿದ್‌ ಅಲ್‌ ಫಲಿಹ್‌ ತಿಳಿಸಿದ್ದಾರೆ.

‘ಬೇಡಿಕೆ ಪೂರೈಸಲು ಸೌದಿ ಅರೇಬಿಯಾ ಈಗಾಗಲೇ ತನ್ನ ದಿನದ ಉತ್ಪಾದನೆಯನ್ನು 1.05 ಕೋಟಿ ಬ್ಯಾರೆಲ್‌ಗಳಿಗೆ ಹೆಚ್ಚಿಸಿದೆ. ಇದಲ್ಲದೆ 20 ಲಕ್ಷ ಬ್ಯಾರೆಲ್‌ ಹೆಚ್ಚುವರಿ ತೈಲ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಅಗತ್ಯ ಬಿದ್ದಾಗ ಅದನ್ನು ಬಳಸಿಕೊಳ್ಳ
ಲಿದೆ’ ಎಂದಿದ್ದಾರೆ.

ಮಂಗಳವಾರ ನಡೆದ ಹೂಡಿಕೆದಾರ ಸಮಾವೇಶದಲ್ಲಿ ಮಾತನಾಡಿದ ಅವರು, ‘ತೈಲ ಮಾರುಕಟ್ಟೆಯಲ್ಲಿನ ಸಹಕಾರ ಮುಂದುವರಿಸಲು ಒಪೆಕ್‌ ಮತ್ತು ಒಪೆಕ್‌ ಸದಸ್ಯರಲ್ಲದ ರಾಷ್ಟ್ರಗಳುಡಿಸೆಂಬರ್‌ನಲ್ಲಿ ಮುಕ್ತ ಒಪ್ಪಂದಕ್ಕೆ ಸಹಿ ಹಾಕಲಿವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT