ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೂ ಬಂತು ಸ್ವಿಸ್ ತಂತ್ರಜ್ಞಾನದ ವೈರಸ್-ನಿರೋಧಕ ಡುರೊಫ್ಲೆಕ್ಸ್ ಬೆಡ್ ಕವರ್

Last Updated 25 ಆಗಸ್ಟ್ 2020, 15:44 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ಸೋಂಕನ್ನು ಜನರು ಮಾಸ್ಕ್‌ ಹಾಗೂ ಸ್ಯಾನಿಟೈಜರ್‌ ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯ ಕಾಳಜಿಯಾಗಿದೆ. ಈ ಕೋವಿಡ್‌ ಸಂದರ್ಭ ಜನರು ಮನೆಗಳಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಮನೆಯಲ್ಲಿ ಕೂಡ ಡುರೊಫ್ಲೆಕ್ಸ್ ಹೆಚ್ಚಿನ ಸುರಕ್ಷತೆಯನ್ನು ನೀಡಬಲ್ಲದಾಗಿದೆ.

ಡುರೊಫ್ಲೆಕ್ಸ್ ಭಾರತೀಯರ ಪ್ರತಿ ಮನೆಯನ್ನು ಸುರಕ್ಷಿತವಾಗಿಸುವಂತಹ ಪರಿಹಾರವನ್ನು ಕಂಡುಹಿಡಿದಿದೆ. ಸ್ವಿಸ್ ತಂತ್ರಜ್ಞಾನದ ಭಾರತದ ಮೊದಲ ವೈರಸ್-ನಿರೋಧಕ ಬೆಡ್ ಕವರ್ಅನ್ನು ಅಭಿವೃದ್ಧಿಪಡಿಸಿದೆ. ಶೇ 99ರಷ್ಟು ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ನಿಮಿಷಗಳಲ್ಲಿ ಕೊಲ್ಲಬಲ್ಲ ಹೈ-ಕ್ಯೂ ವೈರೊ ಮ್ಯಾಟ್ರೆಸ್‌ ಇದಾಗಿದೆ.

ಇದು ಸುಧಾರಿತ ಡುರೊ ಸೇಫ್ ಮ್ಯಾಟ್ರೆಸ್ ಪ್ರೊಟೆಕ್ಟರ್ ಬ್ರ್ಯಾಂಡ್‍ನ ಹೊಸ ಆವಿಷ್ಕಾರವಾಗಿದೆ. ಹೈ-ಕ್ಯೂ ವೈರೋ ಬ್ಲಾಕ್ (ಬೆಡ್‌ ಕವರ್‌)94 ಕ್ಕೂ ಹೆಚ್ಚು ವೈರಸ್‍ಗಳನ್ನು ನಿಮಿಷಗಳಲ್ಲಿ ನಿಷ್ಕ್ರಿಯಗೊಳಿಸಬಲ್ಲದು ಎಂಬುದು ಪ್ರಾಯೋಗಿಕವಾಗಿ ತಿಳಿದುಬಂದಿದೆ. ಇದು ನೂರರಷ್ಟು ನೀರು ಮತ್ತು ಧೂಳು ನಿರೋಧಕವಾಗಿದ್ದು ಹೈಪೋಲಾರೆನ್ಸಿಕ್‌ ತಂತ್ರಜ್ಞಾನ ಚರ್ಮಕ್ಕೆ ಸುರಕ್ಷತೆ ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

ನಾವು ನಮ್ಮ ಜೀವನದಲ್ಲಿ ಮೂರನೇ ಒಂದು ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತೇವೆ ಆದ್ದರಿಂದ ನಮ್ಮ ವಿರಾಮದ ಸ್ಥಳಗಳನ್ನು ಹೆಚ್ಚು ಸುರಕ್ಷಿತವಾಗಿಟ್ಟುಕೊಳ್ಳಬೇಕು. ವೈರಸ್‌, ಬ್ಯಾಕ್ಟಿರೀಯಾಗಳು ಹರಡದಂತೆ ಎಚ್ಚರವಹಿಸಬೇಕು. ಇದಕ್ಕಾಗಿ
ಡುರೊಫ್ಲೆಕ್ಸ್‍ ಕಂಪನಿ ಆ್ಯಂಟಿ ವೈರಲ್‌ ಬೆಡ್‌ ಕವರ್‌ಗಳನ್ನುಪರಿಚಯಿಸಿದೆ ಎಂದು ಡುರೊಫ್ಲೆಕ್ಸ್‍ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮ್ಯಾಥ್ಯೂ ಚಾಂಡಿ ತಿಳಿಸಿದರು.

ಹೈ-ಕ್ಯೂ ವೈರೋ ಬ್ಲಾಕ್ ತಂತ್ರಜ್ಞಾನದ ಮ್ಯಾಟ್ರೆಸ್‌ ಕವರ್‌ಸಂಪೂರ್ಣವಾಗಿ ಸ್ವದೇಶಿ ಬ್ರ್ಯಾಂಡ್‌ ಆಗಿದೆ ಎಂದು ಕಂಪನಿಯ ಮತ್ತೊಬ್ಬ ಅಧಿಕಾರಿ ಮೋಹನ್‌ ರಾಜ್‌ ಮಾಹಿತಿ ನೀಡಿದರು.

ಡ್ಯುರೊ ಸೇಫ್ ಆ್ಯಂಟಿ ವೈರಲ್‌ ಮ್ಯಾಟ್ರೆಸ್‌ ಕವರ್‌ಗಳುಸಿಂಗಲ್, ಡಬಲ್, ಕ್ವೀನ್ ಮತ್ತು ಕಿಂಗ್ ಸೈಜ್‌ನಲ್ಲಿ ಲಭ್ಯವಿವೆ. ಸಿಂಗಲ್ ಗಾತ್ರದ ಮ್ಯಾಟ್ರೆಸ್ ಕವರ್‌‌ ಬೆಲೆ ₹ 2099ರಿಂದ ಆರಂಭವಾಗುತ್ತದೆ. ಮ್ಯಾಟ್ರೆಸ್‌ ಕವರ್‌ಗಳು ಮತ್ತು ಮ್ಯಾಟ್ರೆಸ್‌ಗಳುದೇಶದಾದ್ಯಂತ ಎಲ್ಲಾ ಡುರೊಫ್ಲೆಕ್ಸ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತವೆ. ಹಾಗೇ ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್‍ನಂತಹ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ ದೊರೆಯಲಿದೆ.‌

ವೆಬ್‌ಸೈಟ್: www.duroflexworld.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT