ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಎಟಿಎಂ ನಗದು ಮಿತಿ ಕಡಿತ ಇಂದಿನಿಂದ ಜಾರಿ

Last Updated 30 ಅಕ್ಟೋಬರ್ 2018, 16:33 IST
ಅಕ್ಷರ ಗಾತ್ರ

ನವದೆಹಲಿ: ಎಟಿಎಂಗಳಿಂದ ನಗದು ಪಡೆಯುವ ಕೆಲವು ಡೆಬಿಟ್‌ ಕಾರ್ಡ್‌ಗಳ ದಿನದ ಗರಿಷ್ಠ ಮಿತಿಯನ್ನು ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ₹ 20 ಸಾವಿರಕ್ಕೆ ಇಳಿಸಿದ್ದು, ಹೊಸ ನಿಯಮವು ಬುಧವಾರದಿಂದ ಜಾರಿಗೆ ಬರಲಿದೆ.

ಬ್ಯಾಂಕ್‌ನ ಅತಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಹೊಂದಿರುವ ಕ್ಲಾಸಿಕ್‌ ಮತ್ತು ಮ್ಯಾಸ್ಟ್ರೊ ಡೆಬಿಟ್‌ ಕಾರ್ಡ್‌ಗಳ ಮೂಲಕ ದಿನವೊಂದರಲ್ಲಿ ಪಡೆಯಲಾಗುತ್ತಿದ್ದ₹ 40 ಸಾವಿರದಷ್ಟಿದ್ದ ಗರಿಷ್ಠ ಮಿತಿಯನ್ನು ₹ 20 ಸಾವಿರಕ್ಕೆ ಇಳಿಸಲಾಗಿದೆ. ಬ್ಯಾಂಕ್‌ನ ಇತರ ಡೆಬಿಟ್‌ ಕಾರ್ಡ್‌ಗಳಿಗೆ ಈ ನಿಬಂಧನೆ ಅನ್ವಯಗೊಳ್ಳುವುದಿಲ್ಲ.

ಎಟಿಎಂಗಳಲ್ಲಿ ಡೆಬಿಟ್‌ ಕಾರ್ಡ್‌ಗಳಿಂದ ಪ್ರತಿ ದಿನ ಸರಾಸರಿ ₹ 20 ಸಾವಿರಕ್ಕಿಂತ ಕಡಿಮೆ ಹಣ ಪಡೆಯಲಾಗುತ್ತಿದೆ. ಮಿತಿ ತಗ್ಗಿಸಿರುವುದರಿಂದ ವಂಚನೆ ತಡೆಗಟ್ಟಲು ಮತ್ತು ನಗದುರಹಿತ ವಹಿವಾಟು ಹೆಚ್ಚಿಸಲು ನೆರವಾಗಲಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT