ಸೋಮವಾರ, ಸೆಪ್ಟೆಂಬರ್ 23, 2019
27 °C

ಎಸ್‌ಬಿಐ: ಸ್ಥಿರ ಠೇವಣಿ ಬಡ್ಡಿ ದರ ಕಡಿತ

Published:
Updated:
Prajavani

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ವಿವಿಧ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 0.50ರವರೆಗೆ ಇಳಿಸಿದೆ.

ಸಾಲದ ಮೇಲಿನ ಬಡ್ಡಿ ದರಗಳು ಇಳಿಕೆಯಾಗುತ್ತಿರುವ ಮತ್ತು ನಗದುತನ ಹೆಚ್ಚಳದ ಕಾರಣಕ್ಕೆ ಅವಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇದೇ 26ರಿಂದ ಜಾರಿಗೆ ಬರುವಂತೆ ಕಡಿಮೆ ಮಾಡಲಾಗಿದೆ. ಉಳಿತಾಯ ಖಾತೆಯಲ್ಲಿನ ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ 3ರಷ್ಟು ಮತ್ತು ₹ 1 ಲಕ್ಷದವರೆಗಿನ ಮೊತ್ತಕ್ಕೆ ಶೇ 3.50ರಷ್ಟು ಬಡ್ಡಿ ದರ ಉಳಿಸಿಕೊಳ್ಳಲಾಗಿದೆ ಎಂದು ಬ್ಯಾಂಕ್‌ ಹೇಳಿಕೆಯಲ್ಲಿ ತಿಳಿಸಿದೆ.

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ‘ಎಸ್‌ಬಿಐ’ನ ಈ ನಿರ್ಧಾರವನ್ನು ಇತರ ಬ್ಯಾಂಕ್‌ಗಳೂ ಅನುಸರಿಸುವ ಸಾಧ್ಯತೆ ಇದೆ. ಉಳಿತಾಯ ಬಡ್ಡಿ ಮೇಲಿನ ಆದಾಯ ಕಡಿಮೆಯಾಗಲಿದೆ.

ರಿಟೇಲ್‌ ಅವಧಿ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 0.10 ರಿಂದ ಶೇ 0.50ರವರೆಗೆ ಮತ್ತು ಸಗಟು ಅವಧಿ ಠೇವಣಿ ಮೇಲೆ ಶೇ 0.30 ರಿಂದ ಶೇ 0.70ರವರೆಗೆ ಬಡ್ಡಿ ದರ ಇಳಿಸಲಾಗಿದೆ.

Post Comments (+)