ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠೇವಣಿ ಬಡ್ಡಿ ಅಲ್ಪ ಇಳಿಸಿದ ಎಸ್‌ಬಿಐ

Last Updated 17 ಅಕ್ಟೋಬರ್ 2022, 16:24 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ) ಉಳಿತಾಯ ಖಾತೆಗಳಿಗೆ ನೀಡುವ ಬಡ್ಡಿ ದರವನ್ನು ಶೇ 0.05ರಷ್ಟು ಕಡಿಮೆ ಮಾಡಿದೆ. ಇದು ಶನಿವಾರದಿಂದಲೇ ಜಾರಿಗೆ ಬಂದಿದೆ.

ಈ ಇಳಿಕೆಯು ₹ 10 ಕೋಟಿಗಿಂತ ಕಡಿಮೆ ಮೊತ್ತಕ್ಕೆ ಮಾತ್ರ ಅನ್ವಯವಾಗುತ್ತದೆ. ಈ ಮೊದಲು ಬ್ಯಾಂಕ್‌ ಉಳಿತಾಯ ಖಾತೆಗಳಲ್ಲಿ ಇರುವ ₹ 10 ಕೋಟಿಗಿಂತ ಕಡಿಮೆ ಮೊತ್ತಕ್ಕೆ ಶೇ 2.75ರಷ್ಟು ಬಡ್ಡಿ ನೀಡುತ್ತಿತ್ತು. ಇನ್ನು ಮುಂದೆ ಶೇ 2.70ರಷ್ಟು ಬಡ್ಡಿ ನೀಡಲಿದೆ.

ಹಲವು ಬ್ಯಾಂಕ್‌ಗಳು ಠೇವಣಿಗಳಿಗೆ ನೀಡುವ ಬಡ್ಡಿಯನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲಿ ಎಸ್‌ಬಿಐ ಈ ಕ್ರಮ ಕೈಗೊಂಡಿದೆ. ₹ 10 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಎಸ್‌ಬಿಐ ಇನ್ನು ಮುಂದೆ ಶೇ 3ರಷ್ಟು ಬಡ್ಡಿ ನೀಡಲಿದೆ. ಇದುವರೆಗೆ ಶೇ 2.75ರಷ್ಟು ಬಡ್ಡಿ ನೀಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT