ಶುಕ್ರವಾರ, ಆಗಸ್ಟ್ 6, 2021
25 °C

ಎಸ್‌ಬಿಐ: ಉಳಿತಾಯ ಖಾತೆ ಬಡ್ಡಿ ದರ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ  : ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್‌, ಉಳಿತಾಯ ಖಾತೆ (ಎಸ್‌ಬಿ) ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಕ್ರಮವಾಗಿ ಶೇ 0.5 ಮತ್ತು ಶೇ 0.25ರಷ್ಟು ತಗ್ಗಿಸಿವೆ.

ಎಸ್‌ಬಿಐ, ಎಲ್ಲ ಹಂತಗಳ ಉಳಿತಾಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 2.70ಕ್ಕೆ ಇಳಿಸಿದೆ. ಮೇ 31ರಿಂದಲೇ ಈ ಬಡ್ಡಿ ದರ ಅನ್ವಯವಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎಸ್‌ಬಿಐ ಎರಡನೇ ಬಾರಿಗೆ ಬಡ್ಡಿ ದರ ಇಳಿಸಿದೆ. ಏಪ್ರಿಲ್‌ನಲ್ಲಿ ಶೇ 0.25ರಷ್ಟು ಬಡ್ಡಿ ದರ ತಗ್ಗಿಸಿತ್ತು.

ಐಸಿಐಸಿಐ ಬ್ಯಾಂಕ್‌ ಕೂಡ ₹ 50 ಲಕ್ಷಕ್ಕಿಂತ ಕಡಿಮೆ ಮೊತ್ತದ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 3.25 ರಿಂದ ಶೇ 3ಕ್ಕೆ ಇಳಿಸಿದೆ. ಹೊಸ ದರ ಇದೇ ಗುರುವಾರದಿಂದ ಜಾರಿಗೆ ಬರಲಿದೆ.

ಹೊಸ ಸಾಲಗಳಿಗೆ ಬೇಡಿಕೆ ಕಡಿಮೆಯಾಗಿರುವುದು ಮತ್ತು ಬ್ಯಾಂಕ್‌ಗಳ ಬಳಿ ನಗದು ಪ್ರಮಾಣ ಹೆಚ್ಚಿರುವುದರಿಂದ ಬಡ್ಡಿ ದರಗಳು ಕಡಿಮೆಯಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.