ಮಂಗಳವಾರ, ಅಕ್ಟೋಬರ್ 22, 2019
22 °C

ಎಸ್‍ಬಿಐ: ಡೆಬಿಡ್ ಕಾರ್ಡ್ ‘ಇಎಂಐ’ ಸೌಲಭ್ಯ

Published:
Updated:
Prajavani

ಮುಂಬೈ: ತನ್ನ ಗ್ರಾಹಕರು ಡೆಬಿಟ್‌ ಕಾರ್ಡ್‌ ಮೂಲಕವೂ ಕಂತುಗಳಲ್ಲಿ ಸರಕುಗಳನ್ನು ಖರೀದಿಸುವ ‘ಡೆಬಿಟ್ ಕಾರ್ಡ್ ಇಎಂಐ’ ಸೌಲಭ್ಯವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಆರಂಭಿಸಿದೆ.

ಈ ಸೌಲಭ್ಯದಡಿ, ಗ್ರಾಹಕರು 6 ತಿಂಗಳಿನಿಂದ 18 ತಿಂಗಳವರೆಗೆ ಸಮಾನ ಮಾಸಿಕ ಕಂತು (ಇಎಂಐ) ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. ದೇಶದ 1,500ಕ್ಕೂ ಹೆಚ್ಚು ನಗರಗಳಲ್ಲಿರುವ 40 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳಲ್ಲಿ ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ಯಂತ್ರಗಳ ಸಹಾಯದಿಂದ ಗ್ರಾಹಕರು ಅಗತ್ಯ ವಸ್ತುಗಳನ್ನು ಕಂತುಗಳಲ್ಲಿ ಖರೀದಿಸಲು ಅವಕಾಶವಿದೆ.

ಗ್ರಾಹಕರ ಉಳಿತಾಯ ಖಾತೆಯಲ್ಲಿ ಎಷ್ಟೇ ಹಣ ಇದ್ದರೂ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ವಹಿವಾಟು ಪೂಣಗೊಂಡ ಒಂದು ತಿಂಗಳ ಬಳಿಕ ಇಎಂಐ ಪಾವತಿ ಆರಂಭವಾಗುತ್ತದೆ. ಉತ್ತಮ ಸಾಲ ಇತಿಹಾಸ ಹೊಂದಿದ ಗ್ರಾಹಕರು ಈ ಕಂತಿನ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಇಂತಹ ಗ್ರಾಹಕರಿಗೆ ಎಸ್‍ಎಂಎಸ್ ಮತ್ತು ಇ-ಮೇಲ್‍ನಲ್ಲಿ ಬ್ಯಾಂಕ್‌ನಿಂದ ಮಾಹಿತಿ ನೀಡಲಾಗುತ್ತದೆ. ತಮ್ಮ ಅರ್ಹತೆಯ ಪರಿಶೀಲನೆಗಾಗಿ ಗ್ರಾಹಕರು 567676 ಸಂಖ್ಯೆಗೆ (DCEMI) ಎಂದು ನೋಂದಾಯಿತ ಸಂಖ್ಯೆಯಿಂದ ಎಸ್‍ಎಂಎಸ್ ಸಂದೇಶ ಕಳುಹಿಸಬಹುದು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)