ಭಾನುವಾರ, ನವೆಂಬರ್ 17, 2019
27 °C

ಎಸ್‌ಬಿಐ ಠೇವಣಿ ಬಡ್ಡಿದರ ಕಡಿತ

Published:
Updated:

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ವಿವಿಧ ಠೇವಣಿಗಳ ಬಡ್ಡಿ ದರಗಳಲ್ಲಿ ಕಡಿತ ಮಾಡಿದೆ. ಪರಿಷ್ಕೃತ ಬಡ್ಡಿ ದರಗಳು ಆಗಸ್ಟ್‌ 1 ರಿಂದ ಅನ್ವಯಿಸಲಿವೆ.

ಬ್ಯಾಂಕ್‌ ಬಳಿ ಹೆಚ್ಚುವರಿ ನಗದು ಇರುವುದರಿಂದ ಹಾಗೂ ಬಡ್ಡಿ ದರಗಳಲ್ಲಿ ಇಳಿಕೆ ಆಗುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

7 ರಿಂದ 45 ದಿನಗಳ ಅಲ್ಪಾವಧಿ ಠೇವಣಿಯ ಬಡ್ಡಿ ದರವನ್ನು ಶೇ 5.75 ರಿಂದ ಶೇ 5ಕ್ಕೆ, 45 ದಿನಗಳಿಂದ 179 ದಿನಗಳವರೆಗಿನ ಬಡ್ಡಿದರವನ್ನು ಶೇ 6.25ರಿಂದ ಶೇ 5.75ಕ್ಕೆ ತಗ್ಗಿಸಲಾಗಿದೆ. 

180 ದಿನಗಳಿಂದ 10 ವರ್ಷಗಳವರೆಗಿನ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಶೇ 0.20ರಷ್ಟು ಕಡಿತ ಮಾಡಲಾಗಿದೆ.

₹ 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 0.35ರಷ್ಟು ಇಳಿಕೆ ಮಾಡಿದೆ.

 

ಪ್ರತಿಕ್ರಿಯಿಸಿ (+)