ಭಾನುವಾರ, ಜನವರಿ 26, 2020
31 °C

ಎಸ್‌ಬಿಐ: ಸ್ಥಿರ ಠೇವಣಿ ಬಡ್ಡಿ ದರಗಳಲ್ಲಿ ಕಡಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ತನ್ನಕೆಲ ನಿರ್ದಿಷ್ಟ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನುಶೇ 0.15ರಷ್ಟು ಕಡಿಮೆ ಮಾಡಿದೆ.

₹ 2 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳಿಗೆ ಹೊಸ ಬಡ್ಡಿ ದರಗಳು ಈ ತಿಂಗಳ 10ರಿಂದಲೇ ಅನ್ವಯವಾಗಲಿವೆ. ಒಂದು ವರ್ಷದಿಂದ 10 ವರ್ಷಗಳವರೆಗಿನ ಠೇವಣಿಗಳ ಬಡ್ಡಿ ದರವನ್ನು ಶೇ 6.25ರಿಂದ ಶೇ 6.10ಕ್ಕೆ ಇಳಿಸಿದೆ. ಹಿರಿಯ ನಾಗರಿಕರಿಗೆ ಶೇ 0.50ರಷ್ಟು ಹೆಚ್ಚುವರಿ ಬಡ್ಡಿ ದರ ನೀಡಲಾಗುವುದು.

ಹಿಂದಿನ ತಿಂಗಳು ಬ್ಯಾಂಕ್‌ ತನ್ನ ಬಾಹ್ಯ ಮಾನದಂಡ (ಇಬಿಆರ್‌) ಆಧರಿಸಿದ ವಾರ್ಷಿಕ ಬಡ್ಡಿ ದರವನ್ನು ಶೇ 8.05 ರಿಂದ ಶೇ 7.80 (ಶೇ 0.25) ಇಳಿಸಿತ್ತು. ಇದರಿಂದಾಗಿ ಬ್ಯಾಂಕ್‌ನ ಗೃಹ ಸಾಲ ಬಡ್ಡಿ ದರ ಶೇ 7.90ಕ್ಕೆ ಇಳಿದಿದೆ. 2019ರ ಜುಲೈನಿಂದ ಬ್ಯಾಂಕ್‌ ಬದಲಾಗುವ ಬಡ್ಡಿ ದರ ಗೃಹ ಸಾಲ ಪರಿಚಯಿಸಿದೆ.

ಅವಧಿ ಬಡ್ಡಿ ದರ (%)
7 ದಿನಗಳಿಂದ 45 ದಿನ 4.50
46 ದಿನಗಳಿಂದ 179 ದಿನ 5.50
180 ದಿನಗಳಿಂದ ಒಂದು ವರ್ಷ 5.80
1 ವರ್ಷದಿಂದ 10 ವರ್ಷ 6.10*
* ಹಿರಿಯ ನಾಗರಿಕರಿಗೆ 6.60

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು