ಶುಕ್ರವಾರ, ಮೇ 20, 2022
19 °C

ಎಸ್‌ಬಿಐ ಮ್ಯೂಚುವಲ್‌ ಫಂಡ್‌ ಐಪಿಒಗೆ ಸಮ್ಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಎಸ್‌ಬಿಐ ಮ್ಯೂಚುವಲ್‌ ಫಂಡ್‌ ಕಂಪನಿಯಲ್ಲಿನ ಶೇಕಡ 6ರಷ್ಟು ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಲು ಆಡಳಿತ ಮಂಡಳಿಯ ಒಪ್ಪಿಗೆ ದೊರೆತಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಬುಧವಾರ ತಿಳಿಸಿದೆ.

ಎಸ್‌ಬಿಐ ಫಂಡ್ಸ್‌ ಮ್ಯಾನೇಜ್‌ಮೆಂಟ್‌ ಪ್ರೈ.ಲಿ. ಕಂಪನಿಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮತ್ತು ವಿಶ್ವದ ಮುಂಚೂಣಿ ನಿಧಿ ನಿರ್ವಹಣಾ ಕಂಪನಿಯಾಗಿರುವ ಫ್ರಾನ್ಸ್‌ನ ಅಮುಂಡಿ ಜಂಟಿಯಾಗಿ ನಡೆಸುತ್ತಿವೆ. ಅಮುಂಡಿ ಕಂಪನಿಯು ಎಸ್‌ಬಿಐ ಫಂಡ್ಸ್‌ ಮ್ಯಾನೇಜ್‌ಮೆಂಟ್‌ ಕಂಪನಿಯಲ್ಲಿ ಶೇಕಡ 37ರಷ್ಟು ಷೇರುಗಳನ್ನು ಹೊಂದಿದೆ. ಶೇಕಡ 63ರಷ್ಟು ಷೇರುಗಳನ್ನು ಎಸ್‌ಬಿಐ ಹೊಂದಿದೆ.

ಅಮುಂಡಿ ಕೂಡ ತನ್ನ ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು