ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಬಡ್ಡಿದರ ಶೇ 0.1ರಷ್ಟು ಹೆಚ್ಚಳ

Last Updated 17 ಡಿಸೆಂಬರ್ 2021, 11:24 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸಾಲದ ಮೇಲಿನ ಮೂಲ ಬಡ್ಡಿ ದರವನ್ನು ಶೇಕಡ 0.1ರಷ್ಟು ಹೆಚ್ಚಿಸಿದೆ. ಎಸ್‌ಬಿಐ ಕೈಗೊಂಡಿರುವ ಈ ಕ್ರಮವನ್ನು ಇತರ ಬ್ಯಾಂಕ್‌ಗಳೂ ಅನುಸರಿಸುವ ಸಾಧ್ಯತೆ ಇದೆ.

ಈ ಹೆಚ್ಚಳದ ಪರಿಣಾಮವಾಗಿ ಮೂಲ ಬಡ್ಡಿ ದರವು ಶೇ 7.55ಕ್ಕೆ ಹೆಚ್ಚಳ ಕಾಣಲಿದೆ. ಹೊಸ ಬಡ್ಡಿ ದರವು ಡಿಸೆಂಬರ್ 15ರಿಂದ ಜಾರಿಗೆ ಬಂದಿದೆ. 2019ರ ಜನವರಿ ನಂತರ ಸಾಲ ಪಡೆದವರಿಗೆ ಈ ಹೆಚ್ಚಳದಿಂದ ಯಾವುದೇ ಬದಲಾವಣೆ ಆಗುವುದಿಲ್ಲ, 2019ರ ಜನವರಿಗೂ ಮೊದಲು ಸಾಲ ಪಡೆದವರಿಗೆ ಇದರ ಪರಿಣಾಮ ಆಗಲಿದೆ.

₹ 2 ಕೋಟಿಗಿಂತ ಹೆಚ್ಚಿನ ಮೊತ್ತದ ಅವಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಕೂಡ ಶೇಕಡ 0.1ರಷ್ಟು ಹೆಚ್ಚಳ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT