ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಗೃಹ ಸಾಲ ಉತ್ಸವ

Last Updated 29 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹಮ್ಮಿಕೊಂಡಿರುವ ಎರಡು ದಿನಗಳ ಗೃಹ ಸಾಲ ಉತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು.

ನಗರದಸೇಂಟ್ ಮಾರ್ಕ್ಸ್‌ ರಸ್ತೆ ಸಮೀಪ ಇರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಅಭಿಜಿತ್‌ ಮಜುಂದಾರ್ ಅವರು ಉತ್ಸವಕ್ಕೆ ಚಾಲನೆ ನೀಡಿದರು.

‘40 ಡೆವಲಪರ್‌ಗಳು ಮತ್ತು 200ಕ್ಕೂ ಅಧಿಕ ಯೋಜನೆಗಳು ಉತ್ಸವದಲ್ಲಿ ಇರಲಿವೆ. ಸ್ಥಳದಲ್ಲಿಯೇ ಮಂಜೂರಾದ ಸಾಲದ ಬಡ್ಡಿದರದಲ್ಲಿ ಶೇ 0.15ರಷ್ಟು ವಿನಾಯ್ತಿ ಸಿಗಲಿದೆ. ಕಾರ್ಯಚರಣೆ ಶುಲ್ಕವೂ ಇರುವುದಿಲ್ಲ’ ಎಂದು ಅವರು ವಿವರಿಸಿದರು.

‘ಜುಲೈ 1 ರಿಂದ ಗೃಹ ಸಾಲದ ಬಡ್ಡಿದರವು→ರೆಪೊ ದರದ ಬದಲಾವಣೆಗಳಿಗೆ ಒಳಪಡಲಿದೆ. ಹೀಗಾಗಿ, ಈಗಾಗಲೇ ಗೃಹ ಸಾಲ ಪಡೆದಿರುವ ಗ್ರಾಹಕರು, ಕನಿಷ್ಠ ಶುಲ್ಕ ಪಾವತಿಸುವ ಮೂಲಕ ಹೊಸ ಬಡ್ಡಿದರದ ವ್ಯಾಪ್ತಿಗೆ ಬರಬಹುದು’ ಎಂದರು.

ಎಸ್‌ಬಿಐನ ಗೃಹ ಸಾಲ ಉತ್ಪನ್ನಗಳಾದ ಎಸ್‌ಬಿಐ ಮ್ಯಾಕ್ಸ್‌ ಗೇನ್, ಎಸ್‌ಬಿಐ ಪ್ರಿವಿಲೇಜ್ ಮತ್ತು ಶೌರ್ಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಗ್ರಾಹಕರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT