ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ, ಠೇವಣಿಗೆ ಬಡ್ಡಿ ಹೆಚ್ಚಿಸಿದ ಎಸ್‌ಬಿಐ

Last Updated 14 ಜೂನ್ 2022, 19:45 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ) ಠೇವಣಿ ಹಾಗೂ ಸಾಲದ ಬಡ್ಡಿ ದರ ಹೆಚ್ಚಿಸಿದೆ.

₹ 2 ಕೋಟಿಗಿಂತ ಕಡಿಮೆ ಮೊತ್ತದ ಅವಧಿ ಠೇವಣಿಗಳ ಬಡ್ಡಿ ದರವನ್ನು ಗರಿಷ್ಠ ಶೇ 0.20ರಷ್ಟು ಹೆಚ್ಚಿಸಲಾಗಿದೆ. ಇದು ಮಂಗಳವಾರದಿಂದಲೇ ಜಾರಿಗೆ ಬಂದಿದೆ. 211 ದಿನಗಳಿಂದ 1 ವರ್ಷದವರೆಗಿನ ಠೇವಣಿಗೆ ಇನ್ನು ಮುಂದೆ ಶೇ 4.60ರಷ್ಟು (ಈವರೆಗೆ ಶೇ 4.40ರಷ್ಟು) ಬಡ್ಡಿ ಸಿಗಲಿದೆ. 1 ವರ್ಷಕ್ಕಿಂತ ಹೆಚ್ಚು 2 ವರ್ಷದೊಳಗಿನ ಠೇವಣಿಗೆ ಶೇ 5.30 ಬಡ್ಡಿ ನೀಡಲಾಗುತ್ತದೆ. 2 ವರ್ಷಕ್ಕಿಂತ ಹೆಚ್ಚಿನ 3 ವರ್ಷವರೆಗಿನ ಠೇವಣಿಗೆ ಶೇ 5.35ರಷ್ಟು (ಈವರೆಗೆ ಶೇ 5.20) ಬಡ್ಡಿ ಸಿಗಲಿದೆ. ಈ ಎಲ್ಲ ಠೇವಣಿಗಳಿಗೆ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ 0.50ರಷ್ಟು ಬಡ್ಡಿ ಸಿಗಲಿದೆ.

ಎಂಸಿಎಲ್‌ಆರ್ ಆಧಾರಿತ ಸಾಲದ ಬಡ್ಡಿ ದರವನ್ನು ಬುಧವಾರದಿಂದ ಜಾರಿಗೆ ಬರುವಂತೆ ಎಸ್‌ಬಿಐ ಹೆಚ್ಚಿಸಿದೆ. ಒಂದು ವರ್ಷದ ಎಂಸಿಎಲ್‌ಆರ್ ದರವು ಇನ್ನು ಮುಂದೆ ಶೇ 7.40 ಆಗಲಿದೆ (ಈವರೆಗೆ ಶೇ 7.20 ಇತ್ತು). ಬಹುತೇಕ ವಾಹನ, ಗೃಹ ಮತ್ತು ವೈಯಕ್ತಿಕ ಸಾಲಗಳ ಬಡ್ಡಿ ದರವು ಎಂಸಿಎಲ್‌ಆರ್ ದರದ ಜೊತೆ ಬೆಸೆದುಕೊಂಡಿದೆ.

ರೆ‍ಪೊ ಆಧಾರಿತ ಸಾಲದ ದರವನ್ನು ಬುಧವಾರದಿಂದ ಅನ್ವಯವಾಗುವಂತೆ ಶೇ 7.15ಕ್ಕೆ (ಇದುವರೆಗೆ ಶೇ 6.65 ಆಗಿತ್ತು) ಏರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT