ನವದೆಹಲಿ: ಗ್ರಾಹಕರಿಂದ ಠೇವಣಿ ಆಕರ್ಷಿಸಲು ಸಜ್ಜಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್ಬಿಐ), ‘ಹರ್ ಘರ್ ಲಖ್ಪತಿ’ ಹಾಗೂ ‘ಎಸ್ಬಿಐ ಪೇಟ್ರನ್’ ಹೆಸರಿನ ಹೊಸ ಠೇವಣಿ ಯೋಜನೆಗಳನ್ನು ಜಾರಿಗೊಳಿಸಿದೆ.

ಗ್ರಾಹಕರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಗಳ ಗುರಿಯಾಗಿದೆ. ಅಲ್ಲದೆ, ಅವರಲ್ಲಿ ಉಳಿತಾಯ ಮನೋಭಾವಕ್ಕೆ ಉತ್ತೇಜನ ನೀಡುವ ಗುರಿಯನ್ನೂ ಹೊಂದಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

‘ಹರ್ ಘರ್ ಲಕ್ಪತಿ’ಯು ನಿಶ್ಚಿತ ಠೇವಣಿಯಾಗಿದ್ದು, ಗ್ರಾಹಕರು ₹1 ಲಕ್ಷ ಮೊತ್ತ ಸಂಗ್ರಹಿಸಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದೆ.

‘ಎಸ್ಬಿಐ ಪೇಟ್ರನ್’ ಅವಧಿ ಠೇವಣಿಯಾಗಿದೆ. 80 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಇದನ್ನು ರೂಪಿಸಲಾಗಿದೆ. ದೀರ್ಘಕಾಲದಿಂದ ಬ್ಯಾಂಕ್ನೊಂದಿಗೆ ವ್ಯವಹಾರ ಹೊಂದಿರುವ ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸುವುದು ಈ ಯೋಜನೆಯ ಗುರಿಯಾಗಿದೆ. ಹಾಲಿ ಇರುವ ಹಾಗೂ ಹೊಸ ಅವಧಿ ಠೇವಣಿ ಯೋಜನೆಯಡಿಯೂ ಈ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದೆ.

ಇದರಡಿ ಠೇವಣಿದಾರರಿಗೆ ಹಿರಿಯ ನಾಗರಿಕರಿಗೆ ಹಾಲಿ ಇರುವ ಬಡ್ಡಿದರಕ್ಕಿಂತ ಹೆಚ್ಚುವರಿಯಾಗಿ ಶೇ 0.10ರಷ್ಟು ಬಡ್ಡಿ ಸಿಗಲಿದೆ.

ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವು ಸ್ಥಿರ ಠೇವಣಿ ಮೇಲಿನ ದರದಂತೆಯೇ ಇರಲಿದೆ. ಪ್ರಸ್ತುತ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಸ್ಥಿರ ಠೇವಣಿಗೆ ಶೇ 6.80, ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗೆ ಶೇ 7, ಮೂರು ವರ್ಷಕ್ಕಿಂತ ಹೆಚ್ಚು ಹಾಗೂ ಐದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗೆ ಶೇ 6.75, ಐದರಿಂದ ಹತ್ತು ವರ್ಷದ ಠೇವಣಿಗೆ ಶೇ 6.5ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.

ಈ ನಿಶ್ಚಿತ ಠೇವಣಿ ಅವಧಿಯು ಕನಿಷ್ಠ 12 ತಿಂಗಳು ಹಾಗೂ ಗರಿಷ್ಠ 120 ತಿಂಗಳಾಗಿವೆ (10 ವರ್ಷ).

‘ಈ ಹೊಸ ಠೇವಣಿ ಯೋಜನೆಗಳು ಗ್ರಾಹಕರಿಗೆ ಹಣಕಾಸಿನ ಗಳಿಕೆಯಷ್ಟೇ ನೀಡುವುದಿಲ್ಲ. ಭವಿಷ್ಯದಲ್ಲಿ ಅವರ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ನೀಡಲು ಕ್ರಮವಹಿಸಿದ್ದೇವೆ’ ಎಂದು ಬ್ಯಾಂಕ್ ಅಧ್ಯಕ್ಷ ಸಿ.ಎಸ್. ಸೆಟ್ಟಿ ಹೇಳಿದ್ದಾರೆ.

ಕೇಂದ್ರ ಸರ್ಕಾರವು 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪಿಸಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಹೊಸ ಅನ್ವೇಷಣೆ ಹಾಗೂ ತಂತ್ರಜ್ಞಾನದ ನೆರವು ಕಲ್ಪಿಸುವ ಮೂಲಕ ಪ್ರತಿಯೊಬ್ಬ ಗ್ರಾಹಕರನ್ನು ಸಜ್ಜುಗೊಳಿಸಲು ಬದ್ಧವಾಗಿದ್ದೇವೆ ಎಂದು ಬ್ಯಾಂಕ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.