ರೆಪೊ ದರಕ್ಕೆ ಎಸ್‌ಬಿಐ ಸಾಲ, ಠೇವಣಿ

ಬುಧವಾರ, ಮಾರ್ಚ್ 27, 2019
26 °C

ರೆಪೊ ದರಕ್ಕೆ ಎಸ್‌ಬಿಐ ಸಾಲ, ಠೇವಣಿ

Published:
Updated:

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ಉಳಿತಾಯ ಠೇವಣಿ ದರ ಮತ್ತು ಅಲ್ಪಾವಧಿ ಸಾಲಗಳನ್ನು ಆರ್‌ಬಿಐನ ರೆಪೊ ದರದೊಂದಿಗೆ ಸಂಪರ್ಕಿಸಿದೆ.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಈ ಸೌಲಭ್ಯ ಜಾರಿಗೆ ಬರುತ್ತಿದೆ. ಮೇ 1 ರಿಂದ ಅನ್ವಯಿಸುವಂತೆ, ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಉಳಿತಾಯ ಠೇವಣಿಗಳು, ಎಲ್ಲಾ ನಗದು ಸಾಲ ಖಾತೆಗಳು ಹಾಗೂ ಓವರ್‌ಡ್ರಾಫ್ಟ್‌ಗಳ ಬಡ್ಡಿ ದರಗಳು ರೆಪೊ ದರದ ಬದಲಾವಣೆಗಳಿಗೆ ಒಳಪಡಲಿವೆ.

ಇದರಿಂದ ಆರ್‌ಬಿಐ ರೆಪೊ ದರದಲ್ಲಿ ಬದಲಾವಣೆ ಮಾಡಿದಾಗೆಲ್ಲಾ ಅದರ ಲಾಭವನ್ನು ಗ್ರಾಹಕರಿಗೆ ತ್ವರಿತವಾಗಿ ವರ್ಗಾವಣೆ ಮಾಡಲು ಅನುಕೂಲ ಆಗಲಿದೆ. 

ಆರ್‌ಬಿಐ ತನ್ನ ಹಿಂದಿನ ಹಣಕಾಸು ನೀತಿಯಲ್ಲಿ ರೆಪೊ ದರ ಶೇ 0.25ರಷ್ಟು ತಗ್ಗಿಸಿತ್ತು. ಆದರೆ ಬ್ಯಾಂಕ್‌ಗಳು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಲ್ಲಿ ವಿಳಂಬ ತೋರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗಾಗಿ ಎಸ್‌ಬಿಐ ಈ ನಿರ್ಧಾರ ಕೈಗೊಂಡಿದೆ.

‘ಚಿಲ್ಲರೆ ಗ್ರಾಹಕರನ್ನು ಮಾರುಕಟ್ಟೆ ಅನಿಶ್ಚಿತತೆಯಿಂದ ಕಾಪಾಡಲು ಸಣ್ಣ ಠೇವಣಿ ಮತ್ತು ಸಾಲಗಳನ್ನು ‘ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿದರ’ದ ಅಡಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ರಜನೀಶ್‌ ಕುಮಾರ್ ತಿಳಿಸಿದ್ದಾರೆ.

ಎಸ್‌ಬಿಐನ ಒಟ್ಟಾರೆ ಠೇವಣಿಗಳಲ್ಲಿ ₹ 1 ಲಕ್ಷದವರೆಗಿನ ಮೊತ್ತ ಹೊಂದಿರುವ ಠೇವಣಿಗಳ ಪ್ರಮಾಣ ಶೇ 33ರಷ್ಟಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗುಪ್ತಾ ತಿಳಿಸಿದ್ದಾರೆ. ಸದ್ಯ, ₹ 1 ಕೋಟಿಯವರೆಗಿನ ಉಳಿತಾಯ ಖಾತೆ ಠೇವಣಿಗೆ ಶೇ 3.50ರಷ್ಟು ಮತ್ತು ₹ 1 ಕೋಟಿಗಿಂತಲೂ ಅಧಿಕ ಮೊತ್ತಕ್ಕೆ ಶೇ 4ರಷ್ಟು ಬಡ್ಡಿದರ ನೀಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !