ಬೆಂಗಳೂರು: ಸಾರ್ವಜನಿಕರಿಗೆ ಷೇರು ಮಾರಾಟ (ಐಪಿಒ) ಮಾಡುವ ಮೂಲಕ ಬಂಡವಾಳ ಸಂಗ್ರಹಿಸಲು ಎಸ್ಬಿಐ ಮ್ಯೂಚುವಲ್ ಫಂಡ್ ಮುಂದಾಗಿದೆ. ಇದು ಭಾರತದ ಅತಿದೊಡ್ಡ ಆಸ್ತಿ ನಿರ್ವಹಣಾ ಕಂಪನಿಯಾಗಿದೆ.

ಐಪಿಒ ಕುರಿತ ಕರಡು ದಾಖಲೆ ಪತ್ರಗಳನ್ನು (ಡಿಆರ್ಎಚ್ಪಿ) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಲಾಗಿದೆ. ಆಫರ್ ಫಾರ್ ಸೇಲ್ (ಒಎಫ್ಎಸ್) ಮೂಲಕ 20.37 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಾಗುವುದು ಎಂದು ಎಸ್ಬಿಐ ಮ್ಯೂಚುವಲ್ ಫಂಡ್ ತಿಳಿಸಿದೆ.

ಎಸ್ಬಿಐ ಫಂಡ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್, ಎಸ್ಬಿಐ ಮತ್ತು ಫ್ರಾನ್ಸ್ನ ಅಮುಂಡಿ ಕಂಪನಿಯ ಜಂಟಿ ಪಾಲುದಾರಿಕೆಯನ್ನು ಹೊಂದಿದೆ. ಇದರಲ್ಲಿ ಈ ಎರಡು ಕಂಪನಿಗಳು ಕ್ರಮವಾಗಿ ಶೇ 61.98 ಮತ್ತು ಶೇ 36.40ರಷ್ಟು ಷೇರನ್ನು ಹೊಂದಿವೆ.

ಎಸ್ಬಿಐ ಮ್ಯೂಚುವಲ್ ಫಂಡ್ ಎಸ್ಬಿಐ ಪ್ರಾಯೋಜಕತ್ವ ಹೊಂದಿದ್ದು, 1987ರಲ್ಲಿ ಸ್ಥಾಪನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.