ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐನಿಂದ ಬಡ್ಡಿದರ ಕಡಿತ: ಏಪ್ರಿಲ್‌ 1ರಿಂದ ಗೃಹ ಸಾಲದ ಇಎಂಐ ಇಳಿಕೆ

Last Updated 28 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರದಲ್ಲಿ ಮಾಡಿರುವ ಶೇ 0.75ರಷ್ಟು ಇಳಿಕೆಯನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸುವುದಾಗಿ ಎಸ್‌ಬಿಐ ತಿಳಿಸಿದೆ.

ಬಾಹ್ಯ ಮಾನದಂಡ (ಇಬಿಆರ್‌) ಆಧರಿಸಿದ ವಾರ್ಷಿಕ ಬಡ್ಡಿದರವನ್ನು ಶೇ 7.80 ರಿಂದ ಶೇ 7.05ಕ್ಕೆ ಹಾಗೂ ರೆಪೊ ದರ (ಆರ್‌ಎಲ್‌ಎಲ್‌ಆರ್‌) ಆಧರಿಸಿದ ಸಾಲದ ಮೇಲಿನ ವಾರ್ಷಿಕ ಬಡ್ಡಿದರವನ್ನು ಶೇ 7.40 ರಿಂದ ಶೇ 6.65ಕ್ಕೆ ಇಳಿಕೆ ಮಾಡಲಾಗುವುದು. ಪರಿಷ್ಕೃತ ಬಡ್ಡಿದರಗಳು ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ.

ಈ ನಿರ್ಧಾರದಿಂದಾಗಿ 30 ವರ್ಷಗಳ ಗೃಹ ಸಾಲದ ಮೇಲಿನ ಬಡ್ಡಿದರ ₹ 1 ಲಕ್ಷಕ್ಕೆ ₹ 52ರಂತೆ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದೆ.

ಇದೇ ವೇಳೆ,ರಿಟೇಲ್‌ ಮತ್ತು ದೊಡ್ಡ ಮೊತ್ತದ ಠೇವಣಿಗಳ ಮೇಲಿನ ಬಡ್ಡಿದರ ಕ್ರಮವಾಗಿ ಶೇ 0.20 ಮತ್ತು ಶೇ 1ರಷ್ಟು ಇಳಿಕೆ ಮಾಡಲಾಗಿದೆ ಎಂದೂ ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT