ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ: ಎಸ್‌ಬಿಐ ನಷ್ಟ ₹ 4,876 ಕೋಟಿ

7

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ: ಎಸ್‌ಬಿಐ ನಷ್ಟ ₹ 4,876 ಕೋಟಿ

Published:
Updated:

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ₹ 4,876 ಕೋಟಿ ನಷ್ಟ ಅನುಭವಿಸಿದೆ.

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ  ಬ್ಯಾಂಕ್‌ ಆಗಿರುವ ಎಸ್‌ಬಿಐ, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 2,006 ಕೋಟಿ ನಿವ್ವಳ ಲಾಭ ಗಳಿಸಿತ್ತು.

ವಸೂಲಿಯಾಗದ ಸಾಲ (ಎನ್‌ಪಿಎ) ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿ ಏರಿಕೆ ಕಂಡಿರುವುದರಿಂದ ಈ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಬ್ಯಾಂಕ್‌ ಹೇಳಿದೆ.

ಸರಾಸರಿ ಎನ್‌ಪಿಎ ₹ 1.88 ಲಕ್ಷ ಕೋಟಿಯಿಂದ ₹ 2.13 ಲಕ್ಷ ಕೋಟಿಗೆ (ಶೇ 9.97 ರಿಂದ ಶೇ 19.69) ಏರಿಕೆಯಾಗಿದೆ. ಆದರೆ, ನಿವ್ವಳ ಎನ್‌ಪಿಎ ₹ 1.07 ಲಕ್ಷ ಕೋಟಿಯಿಂದ ₹ 99,236 ಕೋಟಿಗೆ (ಶೇ 5.97 ರಿಂದ ಶೇ 5.29ಕ್ಕೆ) ಇಳಿಕೆಯಾಗಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ನಷ್ಟ ಭರಿಸಲು ತೆಗೆದಿರಿಸುವ ಮೊತ್ತ  ₹ 8,929 ಕೋಟಿಯಿಂದ ₹ 19,228 ಕೋಟಿಗೆ ದುಪ್ಪಟ್ಟಾಗಿದೆ.

ಮಾರುಕಟ್ಟೆ ಮೌಲ್ಯ ಕುಸಿತ 
ತ್ರೈಮಾಸಿಕದಲ್ಲಿ ಭಾರಿ ನಷ್ಟ ಅನುಭವಿಸಿದ ಬಳಿಕ ಷೇರುಪೇಟೆಯಲ್ಲಿ ಶುಕ್ರವಾರ ಬ್ಯಾಂಕ್‌ ಷೇರುಗಳು ಶೇ 5 ರಷ್ಟು ಇಳಿಕೆ ಕಂಡಿವೆ. ಇದರಿಂದ ಬ್ಯಾಂಕ್‌ನ ಬಂಡವಾಳ ಮೌಲ್ಯ ₹ 10,710 ಕೋಟಿಯಷ್ಟು ಕರಗಿದ್ದು, ಒಟ್ಟು ಮೌಲ್ಯ ₹ 2.72 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !