ಎಸ್‌ಬಿಐ ಗೃಹ ಸಾಲದ ಬಡ್ಡಿ ದರ ತುಸು ಅಗ್ಗ

ಶನಿವಾರ, ಏಪ್ರಿಲ್ 20, 2019
26 °C

ಎಸ್‌ಬಿಐ ಗೃಹ ಸಾಲದ ಬಡ್ಡಿ ದರ ತುಸು ಅಗ್ಗ

Published:
Updated:

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ₹30 ಲಕ್ಷದವರೆಗಿನ ಗೃಹ ಸಾಲದ ಬಡ್ಡಿ ದರವನ್ನು ಶೇ 0.10ರಷ್ಟು ತಗ್ಗಿಸಿದೆ. ಬುಧವಾರದಿಂದಲೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.

ಸದ್ಯ, ₹ 30 ಲಕ್ಷದವರೆಗಿನ ಗೃಹ ಸಾಲಕ್ಕೆ ಶೇ 8.70 ರಿಂದ ಶೇ 9ರವರೆಗೆ ಬಡ್ಡಿದರ ಇದೆ. ಶೇ 0.10ರಷ್ಟು ಬಡ್ಡಿದರ ತಗ್ಗಿಸಿರುವುದರಿಂದ ಗ್ರಾಹಕರಿಗೆ ನೀಡುವ ಸಾಲದ ದರವು ಕ್ರಮವಾಗಿ ಶೇ 8.60ಕ್ಕೆ ಮತ್ತು ಶೇ 8.90ಕ್ಕೆ ಇಳಿಕೆಯಾಗಿದೆ. 

ಸಾಲದ ಬಡ್ಡಿದರ ಇಳಿಕೆ: ಎಸ್‌ಬಿಐ, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಮತ್ತು ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿದರದಲ್ಲಿ ಇಳಿಕೆ ಮಾಡಿವೆ.

ಎಸ್‌ಬಿಐ ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ 0.05ರಷ್ಟು ಅಲ್ಪ ಇಳಿಕೆ ಮಾಡಿದೆ. ಇದರಿಂದ ಒಂದು ವರ್ಷದ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿದರ ಶೇ 8.55 ರಿಂದ ಶೇ 8.50ಕ್ಕೆ ಇಳಿಕೆಯಾಗಿದೆ.

ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಸಾಲದ ಬಡ್ಡಿದರವನ್ನು  ಶೇ 0.05ರಷ್ಟು ತಗ್ಗಿಸಿದೆ. ಇದರಿಂದ ಬಡ್ಡಿದರ ಒಂದು ವರ್ಷಕ್ಕೆ ಶೇ 8.65 ಹಾಗೂ ಎರಡು ಮತ್ತು ಮೂರು ವರ್ಷಗಳಿಗೆ ಕ್ರಮವಾಗಿ ಶೇ 8.75 ಮತ್ತು ಶೇ 8.85ರಷ್ಟಾಗಿದೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಈಗಾಗಲೇ ಎಂಸಿಎಲ್‌ಆರ್‌ ಬಡ್ಡಿದರವನ್ನು ಶೇ 0.05ರಷ್ಟು ತಗ್ಗಿಸಿತ್ತು. 

ಪ್ರಸಕ್ತ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಹಣ ಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ರೆಪೊ ದರವನ್ನು ಶೇ 0.25ರಷ್ಟು ತಗ್ಗಿಸಿದೆ. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಬ್ಯಾಂಕ್‌ಗಳು ಕ್ರಮ ಕೈಗೊಳ್ಳಲಾರಂಭಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !