ಮಂಗಳವಾರ, ಸೆಪ್ಟೆಂಬರ್ 24, 2019
28 °C

147 ಲುಕ್‌ಔಟ್‌ ನೋಟಿಸ್‌: ಎಸ್‌ಬಿಐ

Published:
Updated:

ನವದೆಹಲಿ: ಬ್ಯಾಂಕಿಂಗ್‌ ವಂಚನೆಗೆ ಸಂಬಂಧಿಸಿದಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಐದು ತಿಂಗಳಿನಲ್ಲಿ 147 ಲುಕ್‌ಔಟ್‌ ನೋಟಿಸ್‌ (ಎಲ್‌ಒಸಿ) ನೀಡಿದೆ.

ಪುಣೆಯ ಆರ್‌ಟಿಐ ಕಾರ್ಯಕರ್ತ ವಿಹಾರ್‌ ದೃವೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಬ್ಯಾಂಕ್‌ ಈ ಮಾಹಿತಿ ನೀಡಿದೆ. ದೇಶ ಬಿಟ್ಟು ಪರಾರಿ ಆಗುವುದನ್ನು ತಡೆಯುವ ಉದ್ದೇಶದಿಂದ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

2017ರಿಂದ 2019ರ ಅವಧಿಯಲ್ಲಿ ನೀಡಿರುವ ಎಲ್‌ಒಸಿ ಬಗ್ಗೆ ಮಾಹಿತಿ ನೀಡುವಂತೆ ವಿಹಾರ್‌ ಅವರು ಹಣಕಾಸು ಸಚಿವಾಲಯಕ್ಕೆ ಕೇಳಿದ್ದರು. ಸಚಿವಾಲಯವು ಆ ಅರ್ಜಿಯನ್ನು ಗೃಹ ಸಚಿವಾಲಯ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ವರ್ಗಾಯಿಸಿತ್ತು. 

ಈ ಅವಧಿಯಲ್ಲಿ ಯಾವುದೇ ನೋಟಿಸ್‌ ನೀಡಿಲ್ಲ ಎಂದು ಯೂಕೊ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ ತಿಳಿಸಿವೆ. 

Post Comments (+)