ಭಾನುವಾರ, ಅಕ್ಟೋಬರ್ 25, 2020
23 °C

ಗ್ರಾಹಕ ಸೇವಾ ಕೇಂದ್ರ ಆರಂಭಿಸಿದ ಎಸ್‌ಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರದ ಮಾಲೀಕತ್ವದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ)‌ ರಾಜ್ಯದಾದ್ಯಂತ ಒಟ್ಟು 501 ‘ಗ್ರಾಹಕ ಸೇವಾ ಕೇಂದ್ರ’ಗಳನ್ನು ಬುಧವಾರ ಆರಂಭಿಸಿರುವುದಾಗಿ ತಿಳಿಸಿದೆ.

ಈ ಕೇಂದ್ರಗಳ ಮೂಲಕ ಜನ ಉಳಿತಾಯ ಖಾತೆ ತೆರೆಯಬಹುದು, ಕೆಲವು ಬಿಲ್‌ ಪಾವತಿ ಮಾಡಬಹುದು, ಹಣ ವರ್ಗಾವಣೆ ಮಾಡಬಹುದು, ತಮ್ಮ ಪಾಸ್‌ಪುಸ್ತಕಗಳನ್ನು ಅಪ್ಡೇಟ್‌ ಮಾಡಿಕೊಳ್ಳಬಹುದು ಹಾಗೂ ತಮ್ಮ ಕೆವೈಸಿ ವಿವರಗಳನ್ನು ಸಲ್ಲಿಸಬಹುದು ಎಂದು ಎಸ್‌ಬಿಐನ ಪ್ರಕಟಣೆ ತಿಳಿಸಿದೆ.

‘ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಹತ್ತಿರವಾಗುವ ಇನ್ನೊಂದು ಕ್ರಮ ಇದು. ಈ ಕೇಂದ್ರಗಳು ಎಲ್ಲ ದಿನಗಳಲ್ಲೂ ಕೆಲಸ ನಿರ್ವಹಿಸಲಿವೆ. ಗ್ರಾಹಕರಿಗೆ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಸೇವೆಗೆ ಲಭ್ಯವಿರುತ್ತವೆ’ ಎಂದು ಅದು ಹೇಳಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು