ಗುರುವಾರ , ಸೆಪ್ಟೆಂಬರ್ 16, 2021
24 °C

ಎಸ್‌ಬಿಐ ಎಟಿಎಂ ವಿತ್‌ಡ್ರಾ: ಜುಲೈ 1ರಿಂದ ಹೊಸ ಶುಲ್ಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ (ಎಸ್‌ಬಿಐ) ಶೂನ್ಯ ಬ್ಯಾಲೆನ್ಸ್‌ ಖಾತೆ ಅಥವಾ ಸಾಮಾನ್ಯ ಉಳಿತಾಯ ಬ್ಯಾಂಕ್‌ ಠೇವಣಿ ಖಾತೆ (ಬಿಎಸ್‌ಬಿಡಿ) ಹೊಂದಿರುವ ಗ್ರಾಹಕರು ಎಟಿಎಂನಿಂದ, ಬ್ಯಾಂಕ್‌ ಶಾಖೆಗಳಿಂದ ಹಣ ಹಾಗೂ ಚೆಕ್‌ ಬುಕ್ ಪಡೆಯಲು ಕೊಡಬೇಕಿರುವ ಶುಲ್ಕಗಳು ಜುಲೈ 1ರಿಂದ ಬದಲಾಗಲಿವೆ.

ಜುಲೈ 1ರಿಂದ ಪರಿಷ್ಕೃತ ನಿಯಮ ಜಾರಿಗೆ ಬರಲಿದ್ದು, ವಿವಿಧ ಸೇವೆಗಳ ಮೇಲಿನ ಶುಲ್ಕವು ₹ 15 ರಿಂದ ₹ 75ರವರೆಗೆ ಇರಲಿದೆ.

ಎಟಿಎಂ ಮತ್ತು ಶಾಖೆಗಳಿಂದ ಶುಲ್ಕವಿಲ್ಲದೆ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಹಣ ಪಡೆಯಬಹುದು. ಆ ಬಳಿಕ ಪ್ರತಿ ಬಾರಿ ಹಣ ಹಿಂಪಡೆದಾಗಲೂ ₹ 15 ಹಾಗೂ ಜಿಎಸ್‌ಟಿ ಪಾವತಿಸಬೇಕು. ಎಸ್‌ಬಿಐಯೇತರ ಬ್ಯಾಂಕ್‌ಗಳ ಎಟಿಎಂ ನಿಂದ ಹಣ ಪಡೆಯಲೂ ಇದು ಅನ್ವಯ.

ಸದ್ಯ ಹಣಕಾಸು ವರ್ಷವೊಂದರಲ್ಲಿ 10 ಚೆಕ್‌ಗಳಿರುವ ಚೆಕ್‌ಬುಕ್‌ ಅನ್ನು ಎಸ್‌ಬಿಐ ಉಚಿತವಾಗಿ ನೀಡುತ್ತಿದೆ. ಇದಕ್ಕಿಂತ ಹೆಚ್ಚು ಬೇಕಿದ್ದಲ್ಲಿ, 10 ಚೆಕ್‌ಗಳ ಒಂದು ಚೆಕ್‌ಬುಕ್‌ಗೆ ₹ 40 ಶುಲ್ಕ, ಜಿಎಸ್‌ಟಿ ಪಾವತಿಸಬೇಕು. 25 ಚೆಕ್‌ಗಳಿರುವುದಕ್ಕೆ ₹ 75 ಶುಲ್ಕ, ಜಿಎಸ್‌ಟಿ ಪಾವತಿಸಬೇಕು. ತುರ್ತಾಗಿ ಚೆಕ್‌ಬುಕ್‌ ಬೇಕಾದಲ್ಲಿ 10 ಚೆಕ್‌ಗಳಿರುವುದಕ್ಕೆ ₹ 50 ಶುಲ್ಕ, ಜಿಎಸ್‌ಟಿ ಪಾವತಿಸಬೇಕು. ಹಿರಿಯ ನಾಗರಿಕರು ಶುಲ್ಕ ಪಾವತಿಸಬೇಕೆಂದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು