ಭಾನುವಾರ, ಏಪ್ರಿಲ್ 2, 2023
33 °C
ಸೀಮಿತ ಅವಧಿಯ ಮಾನ್ಸೂನ್‌ ಧಮಾಕಾ ಆಫರ್‌ ನೀಡಿದ ಬ್ಯಾಂಕ್‌

ಆಗಸ್ಟ್‌ 31ರವರೆಗೂ ಗೃಹ ಸಾಲದ ಸಂಸ್ಕರಣಾ ಶುಲ್ಕ ಇಲ್ಲ: ಎಸ್‌ಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗೃಹ ಸಾಲಗಳ ಮೇಲಿನ ಸಂಸ್ಕರಣಾ ಶುಲ್ಕವನ್ನು ಆಗಸ್ಟ್‌ ಅಂತ್ಯದವರೆಗೂ ಮನ್ನಾ ಮಾಡಿರುವುದಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶನಿವಾರ ತಿಳಿಸಿದೆ.

ಸದ್ಯ, ಗೃಹ ಸಾಲಗಳ ಮೇಲೆ ಶೇ 0.40ರಷ್ಟು ಸಂಸ್ಕರಣಾ ಶುಲ್ಕ ಇದೆ.

ಗೃಹ ಸಾಲ ಪಡೆಯುವ ಗ್ರಾಹಕರು ‘ಮಾನ್ಸೂನ್‌ ಧಮಾಕಾ ಆಫರ್‌’ ಪ್ರಯೋಜನ ಪಡೆದುಕೊಳ್ಳಬಹುದು. ಇದು ಆಗಸ್ಟ್‌ 31ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿದೆ.

‘ಎಸ್‌ಬಿಐನ ಗೃಹ ಸಾಲದ ಬಡ್ಡಿದರವು ಶೇ 6.70ರಿಂದ ಆರಂಭವಾಗುತ್ತಿದ್ದು, ಇದನ್ನು ಪರಿಗಣಿಸಿದರೆ ಮನೆ ಖರೀದಿಸಲು ಇದಕ್ಕಿಂತ ಉತ್ತಮ ಸಮಯ ಇರಲಾರದು’ ಎಂದು ಬ್ಯಾಂಕ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಬಡ್ಡಿ ದರವು ಐತಿಹಾಸಿಕ ಕಡಿಮೆ ಮಟ್ಟದಲ್ಲಿ ಇರುವುದು ಹಾಗೂ ಸಂಸ್ಕರಣಾ ಶುಲ್ಕ ಮನ್ನಾ ಮಾಡಿರುವುದರಿಂದ ಮನೆ ಖರೀದಿಸುವ ನಿರ್ಧಾರಕ್ಕೆ ಬರಲು ಜನರಿಗೆ ಸುಲಭವಾಗುತ್ತದೆ. ನಾವು ಪ್ರತಿಯೊಬ್ಬ ಭಾರತೀಯನಿಗೆ ಬ್ಯಾಂಕರ್ ಆಗಲು ಪ್ರಯತ್ನಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರರಾಗುತ್ತೇವೆ’ ಎಂದು ಬ್ಯಾಂಕ್‌ನ ರಿಟೇಲ್‌ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್. ಶೆಟ್ಟಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು