ಶನಿವಾರ, ಮಾರ್ಚ್ 6, 2021
18 °C

ಎಸ್‌ಬಿಐ: ₹ 2312 ಕೋಟಿ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 2,312 ಕೋಟಿ ನಿವ್ವಳ ಲಾಭ ಗಳಿಸಿದೆ.

ವರಮಾನ ಹೆಚ್ಚಳ ಮತ್ತು ಸಾಲದ ಮರುಪಾವತಿಯಲ್ಲಿ ಸುಧಾರಣೆ ಆಗಿರುವುದರಿಂದ ಲಾಭ ಗಳಿಕೆ ಸಾಧ್ಯವಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ ₹ 4,875 ಕೋಟಿ ನಷ್ಟಕ್ಕೆ ಗುರಿಯಾಗಿತ್ತು.

ಏಪ್ರಿಲ್‌–ಜೂನ್‌ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ವರಮಾನವು ಹಿಂದಿನ ವರ್ಷದ ₹ 65,492 ಕೋಟಿಗೆ ಹೋಲಿಸಿದರೆ ಈ ಬಾರಿ ₹ 70,653 ಕೋಟಿಗೆ ಏರಿಕೆಯಾಗಿದೆ.

ಬ್ಯಾಂಕ್‌ನ ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ವರ್ಷದ ಹಿಂದಿನ ಶೇ 10.69ರಿಂದ ಶೇ 7.53ಕ್ಕೆ ಇಳಿದಿದೆ. ನಿವ್ವಳ ‘ಎನ್‌ಪಿಎ’ ಕೂಡ ಶೇ 5.29 ರಿಂದ ಶೇ 3.07ಕ್ಕೆ ಇಳಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು