ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸೈಡರ್ ಟ್ರೇಡಿಂಗ್ ವ್ಯಾಪ್ತಿಗೆ ಮ್ಯೂಚುವಲ್‌ ಫಂಡ್‌ ಯೂನಿಟ್‌

Last Updated 25 ನವೆಂಬರ್ 2022, 12:09 IST
ಅಕ್ಷರ ಗಾತ್ರ

ನವದೆಹಲಿ: ಮ್ಯೂಚುವಲ್‌ ಫಂಡ್‌ ಯೂನಿಟ್‌ಗಳ ಖರೀದಿ ಹಾಗೂ ಮಾರಾಟವನ್ನು ‘ಇನ್‌ಸೈಡರ್ ಟ್ರೇಡಿಂಗ್’ ವ್ಯಾಪ್ತಿಗೆ ತರಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ನಿಯಮಗಳಿಗೆ ತಿದ್ದುಪಡಿ ತಂದಿದೆ.

ನಿರ್ದಿಷ್ಟ ಕಂಪನಿಯ ಷೇರು ಮೌಲ್ಯದ ಮೇಲೆ ಪರಿಣಾಮ ಬೀರಬಹುದಾದ ಅಪ್ರಕಟಿತ ಮಾಹಿತಿಯನ್ನು ಹೊಂದಿದ್ದು, ಆ ಕಂಪನಿಯ ಷೇರುಗಳ ವಹಿವಾಟು ನಡೆಸುವುದು (ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಅಥವಾ ನೋಂದಾಯಿತವಾಗಲು ಬಯಸಿರುವ ಕಂಪನಿಗಳ ಷೇರುಗಳು) ಈಗಿರುವ ನಿಯಮಗಳ ಅಡಿಯಲ್ಲಿ ‘ಇನ್‌ಸೈಡರ್ ಟ್ರೇಡಿಂಗ್’ ವ್ಯಾಪ್ತಿಗೆ ಬರುತ್ತದೆ. ಆದರೆ, ಮ್ಯೂಚುವಲ್‌ ಫಂಡ್‌ ಯೂನಿಟ್‌ಗಳನ್ನು ಈ ನಿಯಮಗಳಿಂದ ಹೊರಗೆ ಇರಿಸಲಾಗಿತ್ತು.

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಆಸ್ತಿ ನಿರ್ವಹಣಾ ಕಂಪನಿಯಲ್ಲಿ ನಡೆದ ಕೆಲವು ವಿದ್ಯಮಾನಗಳ ನಂತರದಲ್ಲಿ ಸೆಬಿ ಈ ತೀರ್ಮಾನ ಕೈಗೊಂಡಿದೆ. ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಆಸ್ತಿ ನಿರ್ವಹಣಾ ಕಂಪನಿಯು ಸಾಲಪತ್ರ ಆಧಾರಿತ (ಡೆಟ್‌) ಆರು ಮ್ಯೂಚುವಲ್‌ ಫಂಡ್‌ ಯೋಜನೆಗಳನ್ನು ಸ್ಥಗಿತಗೊಳಿಸುವ ಮೊದಲು ಕಂಪನಿಯ ಕೆಲವು ಸಿಬ್ಬಂದಿ, ಆ ಯೋಜನೆಗಳಲ್ಲಿ ತೊಡಗಿಸಿದ್ದ ಹಣವನ್ನು ನಗದಾಗಿ ಪರಿವರ್ತಿಸಿಕೊಂಡಿದ್ದರು ಎಂಬ ಆರೋಪ ಇತ್ತು.

‘ಮ್ಯೂಚುವಲ್‌ ಫಂಡ್‌ ಯೂನಿಟ್‌ನ ಬೆಲೆಯ ಮೇಲೆ ಪ್ರಭಾವ ಬೀರಬಲ್ಲ ಅ‍ಪ್ರಕಟಿತ ಮಾಹಿತಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ಆ ಯೂನಿಟ್‌ಗಳ ಖರೀದಿ, ಮಾರಾಟದಲ್ಲಿ ತೊಡಗುವಂತೆ ಇಲ್ಲ’ ಎಂದು ಸೆಬಿ ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT