ಮುಂಬೈ: ‘ಅನಿಶ್ಚಿತತೆಯ ಅವಧಿಯಲ್ಲಿ ಹೂಡಿಕೆದಾರರು ತಾಳ್ಮೆಯಿಂದ ಇರಬೇಕು. ಇದು ಅತ್ಯುತ್ತಮವಾದ ತಂತ್ರ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಕಾರಣದಿಂದಾಗಿ ಷೇರುಪೇಟೆ ಸೂಚ್ಯಂಕಗಳು ಕುಸಿದಿವೆ. ಈ ಸಂದರ್ಭದಲ್ಲಿ ಪಾಂಡೆ ಅವರು ಈ ಕಿವಿಮಾತು ಹೇಳಿದ್ದಾರೆ. ಕೋವಿಡ್ ಅಥವಾ ರಷ್ಯಾ–ಉಕ್ರೇನ್ ಯುದ್ಧದ ಅವಧಿಯಲ್ಲಿ ಮಾರುಕಟ್ಟೆ ಇಳಿಕೆ ಕಂಡಿದ್ದರೂ, ನಂತರದಲ್ಲಿ ಮಾರುಕಟ್ಟೆಗಳಲ್ಲಿ ಸ್ಥಿರತೆ ಕಂಡುಬಂತು ಎಂದು ಶನಿವಾರ ಹೇಳಿದ್ದಾರೆ.

ಹೂಡಿಕೆದಾರರು, ಅದರಲ್ಲೂ ಮುಖ್ಯವಾಗಿ ಸಣ್ಣ ಹೂಡಿಕೆದಾರರು ಇಂತಹ ಅನಿಶ್ಚಿತ ಅವಧಿಯಲ್ಲಿ ತಾಳ್ಮೆಯ ನಡೆ ಅನುಸರಿಸುವುದು ಅತ್ಯುತ್ತಮವಾದ ತಂತ್ರ ಎಂದು ಹೇಳಿದ್ದಾರೆ. ಸ್ಥಿರತೆ ಮೂಡಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.

ಜಾಗತಿಕ ಆರ್ಥಿಕತೆಯ ಮೇಲೆ ಅನಿಶ್ಚಿತತೆಯು ಪ್ರಾಬಲ್ಯ ಬೀರಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆ ಮತ್ತು ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟು ಷೇರುಪೇಟೆಗಳ ಮೇಲೆ ಪರಿಣಾಮ ಬೀರಿವೆ. ಆದರೆ, ಹಿಂದಿನ ಘಟನೆಗಳನ್ನು ಅವಲೋಕಿಸಿದರೆ, ಮಾರುಕಟ್ಟೆ ಒಮ್ಮೆ ಇಳಿಕೆ ದಾಖಲಿಸಿದರೂ, ಕಾಲಕ್ರಮೇಣ ಸ್ಥಿರತೆ ಕಾಣುತ್ತದೆ ಎಂಬುದು ಅರಿವಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.

ಬಂಡವಾಳ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಗಳು ಯಾವಾಗಲೂ ಒಮ್ಮೆ ಬಂದುಹೋಗುವುದಿಲ್ಲ. ಅವು ಮತ್ತೆ ಮತ್ತೆ ಎದುರಾಗುತ್ತಲೇ ಇರುತ್ತವೆ. ವ್ಯವಸ್ಥೆಯಲ್ಲಿ ಸವಾಲುಗಳು ಎದುರಾದಾಗಲೂ ಅದು ಸರಾಗವಾಗಿ, ನ್ಯಾಯಯುತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ಪರಿಶೀಲಿಸುವುದು ವ್ಯವಸ್ಥೆಯ ನಿಜವಾದ ಪರೀಕ್ಷೆ ಎಂದು ಕೂಡ ಪಾಂಡೆ ಹೇಳಿದ್ದಾರೆ.

ಹಣಕಾಸು ವ್ಯವಸ್ಥೆಯಲ್ಲಿ ದಕ್ಷತೆಯೇ ನಂಬಿಕೆಯ ಅಡಿಪಾಯ. ನಂಬಿಕೆ ಇಲ್ಲದಿದ್ದರೆ, ಬಂಡವಾಳ ಇಳಿಕೆಯಾಗುತ್ತದೆ. ಹೂಡಿಕೆಯು ನಿಧಾನವಾಗುತ್ತದೆ. ಅಲ್ಲದೆ ಬೆಳವಣಿಗೆಯು ಕಷ್ಟಕರವಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.