ಭುವನೇಶ್ವರ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ದೇಶದ ಷೇರು ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯು ಬಹಳ ಹೆಚ್ಚಾಗಿದ್ದರೂ, ‘ಭಿನ್ನ ಬಗೆಯ ಆಘಾತಗಳನ್ನು ತಾಳಿಕೊಳ್ಳುವ ಶಕ್ತಿಯು ಭಾರತದ ಮಾರುಕಟ್ಟೆಗಳಿಗೆ ಇದೆ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಜಗತ್ತಿನ ಒಂದು ಕಡೆ ಬಿಕ್ಕಟ್ಟು ಸೃಷ್ಟಿಯಾದಾಗ ಅದು ಇತರ ಕಡೆಗಳಲ್ಲಿಯೂ ಪರಿಣಾಮ ಬೀರುತ್ತದೆ ಎಂದು ಅವರು ಸುದ್ದಿಗಾರರ ಬಳಿ ಹೇಳಿದ್ದಾರೆ. ಇಲ್ಲಿ ನಡೆದ, ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ ಪ್ರಾದೇಶಿಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.

‘ಯುದ್ಧದ ಕಾರಣದಿಂದಾಗಿ ಇಂಧನ ಪೂರೈಕೆಯ ಮೇಲೆ ಪರಿಣಾಮ ಉಂಟಾಗಿದೆ... ಭಾರತದ ಮಾರುಕಟ್ಟೆಗಳ ಅನುಕೂಲವೆಂದರೆ, ಬೇರೆ ಬೇರೆ ಬಗೆಯ ಆಘಾತಗಳನ್ನು ಇವು ತಾಳಿಕೊಳ್ಳಬಲ್ಲವು. ಬಿಕ್ಕಟ್ಟುಗಳು ಕೊನೆಗೊಂಡ ನಂತರದಲ್ಲಿ ಮಾರುಕಟ್ಟೆಗಳು ತಮ್ಮ ಎಂದಿನ ಚಲನೆಯನ್ನು ಮತ್ತೆ ಪಡೆಯಲಿವೆ’ ಎಂದು ಪಾಂಡೆ ವಿವರಿಸಿದ್ದಾರೆ.

ಹಣಕಾಸು ಹಾಗೂ ಷೇರುಗಳಿಗೆ ಸಂಬಂಧಿಸಿದ ಸಲಹೆಗಳನ್ನು ನೀಡುವ ‘ಫಿನ್ಫ್ಲುಯೆನ್ಸರ್’ಗಳು ಮೊದಲು ಸೆಬಿ ಬಳಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.