ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ವಿಲ್ಮರ್‌ ಐಪಿಒಗೆ ‘ಸೆಬಿ’ ತಡೆ

Last Updated 21 ಆಗಸ್ಟ್ 2021, 11:32 IST
ಅಕ್ಷರ ಗಾತ್ರ

ನವದೆಹಲಿ: ಖಾದ್ಯತೈಲ ತಯಾರಿಸುವ ಪ್ರಮುಖ ಕಂಪನಿ ಅದಾನಿ ವಿಲ್ಮರ್‌ ಲಿಮಿಟೆಡ್‌ನ (ಎಡಬ್ಲ್ಯುಎಲ್‌) ₹ 4,500 ಕೋಟಿ ಮೊತ್ತದ ಐಪಿಒ ಪ್ರಸ್ತಾವನೆಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತಡೆ ನೀಡಿದೆ.

ಆದರೆ, ಈ ನಿರ್ಧಾರಕ್ಕೆ ಕಾರಣ ಏನು ಎನ್ನುವುದನ್ನು ‘ಸೆಬಿ’ ಸ್ಪಷ್ಟಪಡಿಸಿಲ್ಲ. ಐಪಿಒಗೆ ತಡೆ ನೀಡಿರುವುದಾಗಿ ಅದರ ಜಾಲತಾಣದಲ್ಲಿ ಮಾಹಿತಿ ಇದೆ.

ಕಂಪನಿಯು ಐಪಿಒ ಕುರಿತಾಗಿ ಆಗಸ್ಟ್‌ 3ರಂದು ಸೆಬಿಗೆ ದಾಖಲೆಪತ್ರಗಳನ್ನು ಸಲ್ಲಿಸಿತ್ತು.

‘ಐಬಿಒ ಪ್ರಕ್ರಿಯೆಗೆ ತಡೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಸೆಬಿಯಿಂದ ಯಾವುದೇ ಔಪಚಾರಿಕ ಸಂವಹನವನ್ನು ಸ್ವೀಕರಿಸಿಲ್ಲ’ ಎಂದು ಅದಾನಿ ಸಮೂಹದ ವಕ್ತಾರರೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಾವು ಯಾವಾಗಲೂ ಸೆಬಿಯ ನಿಯಮಾವಳಿಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಾ ಬಂದಿದ್ದೇವೆ. ಈ ಹಿಂದೆಯೂ ಸೆಬಿ ಕೇಳಿರುವ ಮಾಹಿತಿಗಳೆಲ್ಲವನ್ನೂ ಸೆಬಿಗೆ ನೀಡಿದ್ದೇವೆ. ಭವಿಷ್ಯದಲ್ಲಿಯೂ ಅದರ ಜೊತೆಗೆ ಸಹಕರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ಕಂಪನಿಯು ₹ 4,500 ಕೋಟಿ ಮೊತ್ತದ ಹೊಸ ಷೇರುಗಳನ್ನು ಸಾರ್ವಜನಿಕ ವಿತರಣೆಗೆ ಇಡಲು ಮುಂದಾಗಿದೆ.

ತಯಾರಿಕಾ ಘಟಕದ ಸಾಮರ್ಥ್ಯ ಹೆಚ್ಚಿಸಲು, ಹೊಸ ತಯಾರಿಕಾ ಘಟಕ ಸ್ಥಾಪಿಸಲು, ಸಾಲ ಮರುಪಾವತಿಸಲು, ಸ್ವಾಧೀನ ಪ್ರಕ್ರಿಯೆ, ಹೂಡಿಕೆ ಹಾಗೂ ಇನ್ನಿತರ ಕಾರ್ಪೊರೇಟ್‌ ಉದ್ದೇಶಗಳಿಗೆ ಐಪಿಒ ಮೂಲಕ ಸಂಗ್ರಹವಾಗುವ ಬಂಡವಾಳವನ್ನು ಬಳಸಲು ಕಂಪನಿ ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT