ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ ಉತ್ಸಾಹ ತಗ್ಗಿಸಿದ ಆರ್ಥಿಕ ಬಿಕ್ಕಟ್ಟು: ಸೆಬಿ

ಷೇರುಪೇಟೆ ನಿಯಂತ್ರಣ ಮಂಡಳಿಯ ವಾರ್ಷಿಕ ವರದಿಯಲ್ಲಿ ಮಾಹಿತಿ
Last Updated 3 ಸೆಪ್ಟೆಂಬರ್ 2019, 18:08 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಲವು ರೀತಿಯ ಆರ್ಥಿಕ ಬಿಕ್ಕಟ್ಟಿನಿಂದಾಗಿ 2018–19ರಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ₹ 38,930 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಹೂಡಿಕೆ ಚಟುವಟಿಕೆ ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಂಡವಾಳ ಸಂಗ್ರಹ ಅರ್ಹತೆಯನ್ನು ಸರಳಗೊಳಿಸಲಾಗಿದೆ. ದತ್ತಾಂಶ ಸುರಕ್ಷತೆಯ ಬಗೆಗಿನ ಆತಂಕವನ್ನೂ ಪರಿಹರಿಸಲಾಗಿದೆ. ಕಾರ್ಪೊರೇಟ್ ಬಾಂಡ್‌
ಗಳಲ್ಲಿ ಹೂಡಿಕೆಗೆ ಇದ್ದ ಮಿತಿಯನ್ನೂ ಸಡಿಲಿಸಲಾಗಿದೆ ಎಂದು ಹೇಳಿದೆ.

ಸಾಲಪತ್ರಗಳಲ್ಲಿ ಎಫ್‌ಪಿಐ ಮಿತಿಯನ್ನು 2019 ಏಪ್ರಿಲ್‌ನಿಂದ 2019 ಸೆಪ್ಟೆಂಬರ್‌ ಅವಧಿಗೆ ₹ 6.49 ಲಕ್ಷ ಕೋಟಿಯಿಂದ ₹ 6.98 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಅಂತೆಯೇ 2019ರ ಅಕ್ಟೋಬರ್‌ನಿಂದ ₹ 2020ರ ಮಾರ್ಚ್‌ಗೆ ₹ 7.46 ಲಕ್ಷ ಕೋಟಿಗೂ ಏರಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ವಿದೇಶಿ ಬಂಡವಾಳ ಒಳಹರಿವು ಸ್ಥಿರವಾಗಿದ್ದರೆ ದೇಶದ ಆರ್ಥಿಕತೆ ಅದರಲ್ಲಿಯೂ ಮುಖ್ಯವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇಂತಹ ದೇಶಗಳ ಮಾರುಕಟ್ಟೆಗಳು ದೇಶಿ ವಿದ್ಯಮಾನಗಳಿಗಿಂತಲೂ ವಿದೇಶಿ ಬೆಳವಣಿಗೆಗಳ ಮೇಲೆ ಹೆಚ್ಚಿನ ಪ್ರಭಾವ ಹೊಂದಿರುತ್ತವೆ.

ಎಫ್‌ಪಿಐ ಹೊರಹರಿವು: ಬಂಡವಾಳ ಮಾರುಕಟ್ಟೆಯಿಂದ ಆಗಸ್ಟ್‌ನಲ್ಲಿ ₹5,920 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

₹17,592 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ₹ 11,673 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಇದರಿಂದ ಆಗಸ್ಟ್‌ 1 ರಿಂದ 30ರವರೆಗೆ ಹೊರ ಹರಿವು ₹ 5,920 ಕೋಟಿಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT