ಭಾನುವಾರ, ಜೂಲೈ 12, 2020
22 °C

ಕೋವಿಡ್‌ ಹೆಚ್ಚಳ: ಷೇರುಪೇಟೆ ಸೂಚ್ಯಂಕ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವಿಶ್ವದಾದ್ಯಂತ ಕೊರೊನಾ ವೈರಾಣು ಸೋಂಕಿತರ ಸಂಖ್ಯೆಯಲ್ಲಿನ ಹೆಚ್ಚಳವು  ಹೂಡಿಕೆದಾರರಲ್ಲಿ ಆತಂಕ ಮೂಡಿಸಿರುವುದು ಸೋಮವಾರದ ಷೇರುಪೇಟೆಯ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

ಬ್ಯಾಂಕ್‌ ಮತ್ತು ಐ.ಟಿ ಷೇರುಗಳಲ್ಲಿನ ಮಾರಾಟ ಒತ್ತಡದಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 210 ಅಂಶ ಕುಸಿತ ಕಂಡಿತು. ದಿನದ ವಹಿವಾಟಿನಲ್ಲಿ 509 ಅಂಶಗಳಿಗೆ ಎರವಾಗಿದ್ದ ಸೂಚ್ಯಂಕವು ಅಂತ್ಯದಲ್ಲಿ ಕೆಲಮಟ್ಟಿಗೆ ನಷ್ಟ ಭರ್ತಿ ಮಾಡಿಕೊಂಡು 34,961 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಎನ್‌ಸಿಇ ನಿಫ್ಟಿ ಕೂಡ 70 ಅಂಶ ಕಳೆದುಕೊಂಡು 10,312 ಅಂಶಗಳಿಗೆ ತಲುಪಿತು.

ಆ್ಯಕ್ಸಿಸ್‌ ಬ್ಯಾಂಕ್‌ ಗರಿಷ್ಠ ನಷ್ಟ (ಶೇ 5 ) ಕಂಡಿತು. ನಂತರದ ಸ್ಥಾನದಲ್ಲಿ ಟೆಕ್‌ ಮಹೀಂದ್ರಾ, ಎಸ್‌ಬಿಐ, ಎಲ್‌ಆ್ಯಂಡ್‌ಟಿ, ಇಂಡಸ್‌ಇಂಡ್‌ ಬ್ಯಾಂಕ್‌, ಇನ್ಫೊಸಿಸ್‌ ಮತ್ತು ಎನ್‌ಟಿಪಿಸಿ ಷೇರುಗಳು ನಷ್ಟ ದಾಖಲಿಸಿದವು.

ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಯುಎಲ್‌, ಕೋಟಕ್‌ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌ ಲಾಭ ಮಾಡಿಕೊಂಡವು.

ಕೋವಿಡ್‌ ಸಾವಿನ ಪ್ರಕರಣಗಳಲ್ಲಿನ ಹೆಚ್ಚಳವು ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಅಡ್ಡಿಪಡಿಸಲಿವೆ ಎನ್ನುವ ಕಳವಳವು ಹೂಡಿಕೆದಾರರಲ್ಲಿ ಮನೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು