ಮುಂಬೈ: ಸೆನ್ಸೆಕ್ಸ್ 478 ಅಂಶ ಹೆಚ್ಚಳ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ನಕಾರಾತ್ಮಕ ಚಲನೆ ಇದ್ದರೂ ಎಚ್‌ಡಿಎಫ್‌ಸಿ, ಕೋಟಕ್ ಬ್ಯಾಂಕ್ ಮತ್ತು ಇನ್ಫೊಸಿಸ್ ಷೇರುಗಳ ಗಳಿಕೆಯಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) 478 ಅಂಶ ಏರಿಕೆ ಕಂಡು 60,545 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 152 ಅಂಶ ಹೆಚ್ಚಾಗಿ 18,068 ಅಂಶಗಳಿಗೆ ಏರಿಕೆ ಆಯಿತು.
ಮಂದಗತಿಯಲ್ಲಿ ವಹಿವಾಟು ಆರಂಭ ಆದರೂ ಇಂಧನದ ಮೇಲಿನ ತೆರಿಗೆ, ಎಕ್ಸೈಸ್ ಸುಂಕ ಕಡಿತ, ಸೇವಾ ವಲಯದ ಪಿಎಂಐ ಸುಧಾರಣೆ ಹಾಗೂ ಹಬ್ಬದ ಅವಧಿಯ ಮಾರಾಟವು ಗರಿಷ್ಠ ಮಟ್ಟಕ್ಕೆ ತಲುಪಿರುವ ಕಾರಣಗಳಿಂದಾಗಿ ದೇಶಿ ಷೇರುಪೇಟೆ ಸೂಚ್ಯಂಕಗಳು ಆರಂಭದ ನಷ್ಟದಿಂದ ಹೊರಬಂದು ಗಳಿಕೆ ಕಂಡುಕೊಂಡವು ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ರೂಪಾಯಿ ಮೌಲ್ಯ ವೃದ್ಧಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 43 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 74.03ರಂತೆ ವಿನಿಮಯಗೊಂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.