ಷೇರುಪೇಟೆ ವಹಿವಾಟು 6 ತಿಂಗಳ ಗರಿಷ್ಠ

ಬುಧವಾರ, ಏಪ್ರಿಲ್ 24, 2019
32 °C

ಷೇರುಪೇಟೆ ವಹಿವಾಟು 6 ತಿಂಗಳ ಗರಿಷ್ಠ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ 7ನೇ ವಹಿವಾಟು ಅವಧಿಯಲ್ಲಿಯೂ ಸೂಚ್ಯಂಕಗಳು ಏರಿಕೆ ದಾಖಲಿಸಿವೆ.

ಐಟಿಸಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಇನ್ಫೊಸಿಸ್‌ ಕಂಪನಿಗಳ ಷೇರುಗಳ ಗಳಿಕೆ ಮತ್ತು ವಿದೇಶಿ ಬಂಡವಾಳ ಒಳಹರಿವು ಸಕಾರಾತ್ಮಕ ಚಲನೆ ಮುಂದುವರಿಯುವಂತೆ ಮಾಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 268 ಅಂಶ ಹೆಚ್ಚಾಗಿ ಆರು ತಿಂಗಳ ಗರಿಷ್ಠ ಮಟ್ಟವಾದ 38,363 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 70 ಅಂಶ ಹೆಚ್ಚಾಗಿ ಆರು ತಿಂಗಳ ಗರಿಷ್ಠ ಮಟ್ಟವಾದ 11,532 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಕೇಂದ್ರದಲ್ಲಿನ ಆಡಳಿತಾರೂಢ ಸರ್ಕಾರವೇ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಿಂದ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಮತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಾಗುತ್ತಿದೆ. ಇದು ಷೇರುಪೇಟೆ ಚಟುವಟಿಕೆಯನ್ನು ಉತ್ತೇಜಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ರಿಯಲ್ ಎಸ್ಟೇಟ್‌ ವಲಯದ ಮೇಲಿನ ಜಿಎಸ್‌ಟಿ ಬದಲಾಯಿಸಲು ಜಿಎಸ್‌ಟಿ ಮಂಡಳಿ ಒಪ್ಪಿಗೆ ನೀಡಿದೆ. ಇದು ಸಹ ಸಕಾರಾತ್ಮಕ ಚಲನೆಗೆ ನೆರವಾಯಿತು ಎಂದೂ ಹೇಳಿದ್ದಾರೆ.

ಆರ್‌ಕಾಂ ಷೇರುಗಳಿಕೆ

ಎರಿಕ್ಸನ್‌ಗೆ ₹462 ಕೋಟಿ ಬಾಕಿ ಪಾವತಿಸಿರುವುದರಿಂದ ರಿಲಯನ್ಸ್‌ ಕಮ್ಯುನಿಕೇಷನ್‌ನ ಷೇರುಗಳು ಮಂಗಳವಾರ ಶೇ 10ರವರೆಗೂ ಏರಿಕೆ ದಾಖಲಿಸಿದವು.

ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ₹ 111  ಕೋಟಿಗಳಷ್ಟು ಹೆಚ್ಚಾಗಿ ₹ 1,217 ಕೋಟಿಗಳಿಗೆ ಏರಿಕೆಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !