ಮುಂಬೈ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಶಮನಗೊಳ್ಳುವ ಆಶಾಭಾವ ಮೂಡಿದ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಇಳಿಕೆ ಕಂಡಿತು. ಇದರ ಪರಿಣಾಮವಾಗಿ ದೇಶದ ಷೇರುಪೇಟೆಗಳಲ್ಲಿ ಬುಧವಾರ ತೇಜಿ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 940 ಅಂಶ ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 298 ಅಂಶ ಏರಿಕೆ ಕಂಡವು. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಉತ್ತಮ ವಹಿವಾಟು ಕೂಡ ದೇಶಿ ಮಾರುಕಟ್ಟೆಗಳಿಗೆ ಹುರುಪು ತುಂಬಿದವು.

ಸಾಲ ಖಾತರಿ ಯೋಜನೆಯ ಘೋಷಣೆ ಹಾಗೂ ಕಚ್ಚಾ ತೈಲದ ಬೆಲೆ ಇಳಿಕೆಯ ಪರಿಣಾಮವಾಗಿ ಇಂಟರ್ಗ್ಲೋಬ್ ಏವಿಯೇಷನ್ ಕಂಪನಿಯ ಷೇರುಮೌಲ್ಯವು ಶೇ 6.6ರಷ್ಟು ಹೆಚ್ಚಳ ಕಂಡಿತು.

‘ಮಾರುಕಟ್ಟೆ ಜಿಗಿತಕ್ಕೆ ಜಾಗತಿಕ ಸಂಗತಿಗಳೇ ಮುಖ್ಯವಾಗಿದ್ದವು. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದವೊಂದು ಸಾಧ್ಯವಾಗುತ್ತದೆ ಎಂಬ ಆಶಾವಾದವು ಕಚ್ಚಾ ತೈಲದ ಬೆಲೆಯು ತೀವ್ರವಾಗಿ ಇಳಿಕೆ ಕಾಣಲು ಕಾರಣವಾಯಿತು’ ಎಂದು ಲಿವ್ಲಾಂಗ್ ವೆಲ್ತ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಹರಿಪ್ರಸಾದ್ ಕೆ. ಹೇಳಿದ್ದಾರೆ.

ಕೇಂದ್ರ ಸಚಿವ ಸಂಪುಟವು ಸಾಲ ಖಾತರಿ ಯೋಜನೆಯನ್ನು ಘೋಷಣೆ ಮಾಡಿರುವುದು ಬ್ಯಾಂಕಿಂಗ್ ವಲಯದ ಷೇರುಗಳಿಗೆ ನೆರವಾಯಿತು ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್ನ ಹಿರಿಯ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

ಬ್ರೆಂಟ್ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ 8ರಷ್ಟು ಇಳಿಕೆ ಆಗಿ ಬ್ಯಾರಲ್ಗೆ 101.1 ಡಾಲರ್ಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.